ದೇಶದಲ್ಲಿ ಕೊರೋನಾ ಹೊಸ ತಳಿ ಪತ್ತೆ…!

ನವದೆಹಲಿ:

      ಹೊಸ ಕೋವಿಡ್ ರೂಪಾಂತರ EG.5 ಅಥವಾ Eris’ ಅಮೆರಿಕ, ಚೀನಾ ಸೇರಿದಂತೆ ವಿಶ್ವಾದ್ಯಂತ ವೇಗವಾಗಿ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ಆಸಕ್ತಿಯ ರೂಪಾಂತರ’ ಎಂದು ವರ್ಗೀಕರಿಸಿದೆ. ಆದಾಗ್ಯೂ, ಇದು ಸಾರ್ವಜನಿಕರ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಅಪೆಕ್ಸ್ ಗ್ಲೋಬಲ್ ಹೆಲ್ತ್ ವಾಚ್‌ಡಾಗ್ ಎಂದು ಭರವಸೆ ನೀಡಿದೆ.

    ಅಮೆರಿಕದಲ್ಲಿ ಇಲ್ಲಿಯವೆಗೂ ಸುಮಾರು ಶೇ. 17 ರಷ್ಟು EG.5 ರೂಪಾಂತರ ಪ್ರಕರಣಗಳು ಕಂಡುಬಂದಿದೆ. ಇದರೊಂದಿಗೆ ಚೀನಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಕೆನಡಾದಲ್ಲಿಯೂ ಈ ತಳಿಯ ಪ್ರಕರಣಗಳು ವರದಿಯಾಗಿದೆ. ಇದೇ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಇಜಿ.5.1 ಪತ್ತೆಯಾಗಿದೆ.

    ಕೋವಿಡ್ -19 ಸಾಂಕ್ರಾಮಿಕ ಪ್ರಪಂಚದಾದ್ಯಂತ 6.9 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಂಡಿದೆ. ವೈರಸ್ ಕಾಣಿಸಿಕೊಂಡಾಗಿನಿಂದಲೂ 768 ಮಿಲಿಯನ್‌ಗಿಂತಲೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.  ಮಾರ್ಚ್ 2020 ರಲ್ಲಿ ವಿಶ್ವಸಂಸ್ಥೆ ಸಾಂಕ್ರಾಮಿಕ ರೋಗವೆಂದು ಘೋಷಿಸಿತ್ತು. ಆದರೆ ಈ ವರ್ಷದ ಮೇ ತಿಂಗಳಲ್ಲಿ ಕೋವಿಡ್ -19 ಗಾಗಿ ಜಾಗತಿಕ ತುರ್ತುಸ್ಥಿತಿ ಸ್ಥಿತಿ ಕೊನೆಗೊಂಡಿತು.

   ಪ್ರಸ್ತುತ ಹರಡುತ್ತಿರುವ ಓಮಿಕ್ರಾನ್ ಉಪ ಪ್ರಬೇಧ  EG.5  ಕುರಿತು ಲಭ್ಯವಿರುವ ಸಾಕ್ಷ್ಯಾಧಾರಗಳಲ್ಲಿ ಇದು ಸಾರ್ವಜನಿಕರ ಆರೋಗ್ಯದ ಮೇಲೆ ಹೆಚ್ಚಿನ ಅಪಾಯವನ್ನುಂಟು ಮಾಡಲ್ಲ ಎಂಬುದು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದು ಓಮಿಕ್ರಾನ್ ಗಿಂತ ಹೆಚ್ಚು ತೀವ್ರವಾಗಿಲ್ಲ ಎಂದು ಕೋವಿಡ್-19 ಸಾಂಕ್ರಾಮಿಕ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥರಾದ ಮರಿಯಾ ವ್ಯಾನ್ ಕೆರ್ಕೋವಾ ತಿಳಿಸಿದ್ದಾರೆ.

   ಇದೇ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಇಜಿ.5.1 ಪತ್ತೆಯಾಗಿದೆ ಎಂದು ಮಹಾರಾಷ್ಟ್ರ ಜೀನೋಮ್ ಸಿಕ್ವೆನ್ಸಿಂಗ್ ರಾಜ್ಯ ಸಂಯೋಜಕ ಬಿಜೆ ಮೆಡಿಕಲ್ ಕಾಲೇಜಿನ ಹಿರಿಯ ವಿಜ್ಞಾನಿ ರಾಜೇಶ್ ಕಾರ್ಯಕಟೆ ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap