ತಿಪಟೂರು
ನೀತಿ ದಂಹಿತೆ ನೆಪವೊಡ್ಡಿ ಭಾರತದ ಸಂವಿಧಾನಶಿಲ್ಪ ಅಂಬೇಡ್ಕರ್ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಕಛೇರಿಯಲ್ಲಿ ಇಂದು ಬೆಳಗ್ಗೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ಕಾಟಾಚಾರಕ್ಕೆ ಆಯೋಜಿಸಿದ್ದಾರೆ ಮತ್ತು ಸರ್ಕಾರಿ ಇಲಾಖೆಯ ಅಧಿಕಾರಿಗಳು ಸಹ ಇರಲಿಲ್ಲ ಅವರಿಗೂ ಕೂಡ ಚುನಾವಣೆಯ ನೀತಿಸಂಹಿತೆ ಇದೆಯೇ? ಎಂಬಂತೆ ಕಂಡು ಬಂದಿದ್ದು ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟಿದ್ದು ನೀತಿ ಸಂಹಿತೆಯ ನೆಪವೊಡ್ಡಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆಂದು ದಲಿತರು ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸ್ಪಷ್ಠೀಕರಣ ನೀಡಬೇಕೆಂದು ಆಗ್ರಹಿಸಿದ ಘಟನೆ ಇಂದು ತಾಲ್ಲೂಕು ಕಛೇರಿಯಲ್ಲಿ ನಡೆಯಿತು.
ದಲಿತರ ಸ್ವಾಭಿಮಾನಕ್ಕೆ ದಕ್ಕೆ : ನೀತಿ ಸಂಹಿತೆ ಇದ್ದರೆ ಸ್ವಾತಂತ್ರ್ಯ ದಿನಾಚರಣೆಯನ್ನು ಗಣರಾಜ್ಯೋತ್ಸವವನ್ನು ಸರಳವಾಗಿ ಅಥವಾ ಕಾಟಾಚಾರಕ್ಕೆ ಆಚರಿಸುತ್ತಾರೆಯೇ ಇಲ್ಲಾ ಹೀಗೆಯೇ ಕೊಠಡಿಯೊಳಗೆ ಆಚರಿಸುತ್ತೀರಾ ನಮಗೆ ರಾತ್ರಿ ಹತ್ತುಗಂಟೆಗೆ ಕರೆಮಾಡಿ ಅದು ಸಹ ಇದು ಕೇವಲ ನಾನು ಮಾಡುತ್ತಿರುವ ಕರೆಯೆಂದು ತಿಳಿಸಿ ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಜಯಂತಿ ಇದೆ ಎಂದು ತಿಳಿಸುತ್ತಾರೆ.
ಏಕೆ ಅಂಬೇಡ್ಕರ್ ಜಯಂತಿ ಶಿವರಾತ್ರಿ, ಸಂಕ್ರಾಂತಿ ಯುಗಾಂದಿಯಂತೆ ಒಂದು ದಿನ ಬರುತ್ತದೆಯೇ? ಅದು ಬರುವುದು ಪ್ರತಿವರ್ಷ ಏಪ್ರಿಲ್ 14 ಅಂದು ದಲಿತರಿಗೆ ಸ್ವಾಭಿಮಾನದ ದಿನ ಅದು ಸಹ ಪ್ರಜಾಪ್ರಭುತ್ವವನ್ನು ಕೊಟ್ಟ ಅಂಬೇಡ್ಕರ್‍ಗೆ ಚುನಾವಣಾ ನೀತಿಸಂಹಿತೆ ತಟ್ಟಿತೆ ಎಂದು ದಿತ ಮುಖಂಡ ಕುಂದೂರು ತಿಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿವಿದೆಡೆ ಮತ್ತು ತಾಲ್ಲೂಕಿನಾದ್ಯಂತ ಅಂಬೇಡ್ಕರ್ ಜಂಯಂತಿ ಆಚರಣೆ : ನೊಣವಿನಕೆರೆಯಲ್ಲಿ ದಲಿತ ಯುವಕರು ಮುಖಂಡರು ದೇವಿ ಮರಮ್ಮ ದೇವಸ್ಥಾನದ ಹತ್ತಿರ ಹಬ್ಬದರೀತಿಯಲ್ಲಿ ಶೃಂಗಾರಮಾಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಗರದ ಕೆ.ಆರ್.ಬಡಾವಣೆಯ 3ನೇ ಕ್ರಾಸ್‍ನಲ್ಲಿ ಜಯಕರ್ನಾಟಕ ಸಂಘಟನೆ ಮತ್ತು ಕಂಚಾಘಟ್ಟದಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಮತ್ತು ಅರಸೀಕೆರೆ ಶಾಸಕ ಶಿವರಾಮೆಗೌಡರು ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
