ನೇರ ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

0
16

ದಾವಣಗೆರೆ:

ನಾಗರೀಕರು ನೇರವಾಗಿ ನಮ್ಮನ್ನು ಸಂಪರ್ಕಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದ್ದಾರೆ.

ನಗರದ ವಿಜಯನಗರ ಬಡಾವಣೆ ಸೇರಿದಂತೆ ವಿವಿಧೆಡೆಯಲ್ಲಿ ಶುಕ್ರವಾರ ಜಲಸಿರಿ ಮತ್ತು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿ, ನಾಗರೀಕರ ದಾರಿ ತಪ್ಪುಸುತ್ತಿದ್ದಾರೆ. ನಾಗರೀಕರಿಗಿರುವ ಕಷ್ಟ ಹಾಗೂ ಸಮಸ್ಯೆಗಳಿಗೆ ನೇರವಾಗಿ ನಮ್ಮನ್ನು ಭೇಟಿ ಮಾಡಿ, ಸಮಸ್ಯೆಗಳ ಬಗ್ಗೆ ಹೇಳಿದರೆ, ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ ಸಮಸ್ಯಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರನಾಥ್ ಅವರಿಗೆ ಇಚ್ಚಾಸಕ್ತಿ ಹಾಗೂ ಜನರ ಬಗ್ಗೆ ಕಾಳಜಿ ಇದ್ದಲ್ಲಿ, ನಗರದಲ್ಲಿ ಮತ್ತೊಂದು ಗಾಜಿನಮನೆ ನಿರ್ಮಿಸಲಿ ಅದನ್ನು ಬಿಟ್ಟು, ಈಗಾಗಲೇ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಂಡ ಗಾಜಿನಮನೆಯನ್ನು ಮತ್ತೆ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾಜುರ್ನರವರು ನೀರಾವರೊ ಇಲಾಖೆಯಿಂದ ಅನುದಾನ ತಂದು ಚಾಲನೆ ನೀಡಿದ್ದ ಕಾಮಗಾರಿಗೆ, ರವೀಂದ್ರನಾಥ್ ಕಳೆದ ವಾರ ಮತ್ತೆ ಚಾಲನೆ ನೀಡಿದ್ದಾರೆ. ಇದು ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ತೋರಿಸಿಕೊಡಲಿದೆ ಎಂದು ಹೇಳಿದರು.

ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಸಮರ್ಪಕ ನೀರು ಸರಬರಾಜು ಮಾಡಬೇಕೆಂಬ ಉದ್ದೇಶದಿಂದ ಹಿಂದಿನ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ್ 35 ಕೋಟಿ ಮೊತ್ತದ ಜಲಸಿರಿ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ಪಡೆದು, ಅಂದಿನ ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸಿದ್ದರು. ಈಗ ಈ ಜಲಸಿರಿ ಯೋಜನೆಯಡಿ ನಿರ್ಮಾಣವಾಗುವ 19 ಓವರ್ ಹೆಡ್ ಟ್ಯಾಂಕ್‍ಗಳ ಪೈಕಿ ಇಂದು ಬಾಷಾನಗರದಲ್ಲಿ 15 ಲಕ್ಷ ಗ್ಯಾಲನ್ ಹಾಗೂ ಯರಗುಂಟೆಯಲ್ಲಿ 8 ಲಕ್ಷ ಗ್ಯಾಲನ್ ಸಂಗ್ರಹದ ಓವರ್ ಹೆಡ್ ಟ್ಯಾಂಕ್‍ಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮಳೆ ಇಲ್ಲದ ಸಂದರ್ಭದಲ್ಲೂ ಸಹ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗಿದ್ದು, ಇದೀಗ ವಾರಕ್ಕೇರಡು ಬಾರಿ ನೀರು ಪೂರೈಸಲಾಗಿದ್ದು, ಮುಂದಿನ ವಾರದಿಂದ 2 ದಿನಕ್ಕೊಮ್ಮೆ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯ ಮಹಾಪೌರರಾದ ಶ್ರೀಮತಿ ಶೋಭಾ ಪಲ್ಲಾಗಟ್ಟೆ, ಉಪ ಮಹಾಪೌರರಾದ ಕೆ.ಚಮನ್‍ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹೆಚ್.ತಿಪ್ಪಣ್ಣ, ಸುರೇಂದ್ರ ಮೊಯಿಲಿ, ಶ್ರೀಮತಿ ಅನ್ನಪೂರ್ಣಮ್ಮ ಪೂಜಾರ್ ಬಸವರಾಜ್, ಕೆ.ಆರ್.ಮಹಿಬೂಬ್ ಸಾಬ್, ಸದಸ್ಯರುಗಳಾದ ದಿನೇಶ್ ಕೆ.ಶೆಟ್ಟಿ, ಬಸಪ್ಪ, ಹೆಚ್.ಬಿ.ಗೋಣೆಪ್ಪ, ಶ್ರೀಮತಿ ಲಕ್ಷ್ಮೀದೇವಿ ಬಿ.ವೀರಣ್ಣ, ಶ್ರೀಮತಿ ದಿಲ್‍ಶಾದ್ ಶೇಕ್ ಅಹ್ಮದ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸೈಯದ್ ಸೈಪುಲ್ಲಾ, ಸಾಧಿಕ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್, ಬಿ.ವೆಂಕಣ್ಣ, ನಾಗೇಂದ್ರಪ್ಪ, ಉಮೇಶ್, ಪ್ರೇಮ್ ಕುಮಾರ್, ಕರಿಯಪ್ಪ, ಆನಂದಪ್ಪ, ಗುತ್ತಿಗೆದಾರ ಮಹಾಂತೇಶ್ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here