ನ್ಯೂಯಾರ್ಕ್‌ನ ಮ್ಯಾನ್ ಹಟ್ಟನ್ ನಲ್ಲಿ ಸ್ಫೋಟ, ಶಂಕಿತನ ಬಂಧನ

0
24

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ಮ್ಯಾನ್ ಹಟ್ಚನ್ ನಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಂದು ಬೆಳಗಿನ ಜಾವ ಮ್ಯಾನ್ ಹಟ್ಚನ್ ನ ಜನನಿಬಿಡ ಸ್ಥಳದಲ್ಲಿ ಬಾಂಬ್‌ ಸ್ಫೋಟವಾಗಿದೆ. ಪೋರ್ಟ್‌ ಅಥಾರಿಟಿ ಮೈದಾನದ ಸಮೀಪ ಪೈಪ್‌ ಬಾಂಬ್‌ ಪತ್ತೆಯಾಗಿದ್ದು, ಸ್ಫೋಟ ಸಂಭವಿಸಿದ ಸ್ಥಳದಿಂದ ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸರು ಹೇಳಿದ್ದಾರೆ.

ಸುರಂಗ ಮಾರ್ಗದಲ್ಲಿ ಮತ್ತೊಂದು ಸ್ಫೋಟಕ ಪತ್ತೆಯಾಗಿದೆ. ಪೋರ್ಟ್‌ ಅಥಾರಿಟಿ ಮತ್ತು ಟೈಮ್ಸ್‌ ಚೌಕಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದ ಬದಲು ಬೇರೆ ಮಾರ್ಗ ಬಳಸಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಘಟನೆಯಿಂದಾಗಿ ಕೆಲವು ಸುರಂಗ ಮಾರ್ಗಗಳ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here