ಪನ್ನೀರ್ ಕಟ್ಲೆಟ್ ರೆಸಿಪಿ

0
142

ಕೆಲವು ರೆಸಿಪಿಗಳನ್ನು ಹೆಚ್ಚು ಶ್ರಮ ವಹಿಸದೇ, ಅತ್ಯಂತ ಸುಲಭವಾಗಿ ತಯಾರಿಸಬಹುದು. ದಿಢೀರನೆ ಮನೆಗೆ ಯಾರಾದರು ನೆಂಟರಿಷ್ಟರು ಬಂದರೆ, ಸುಲಭವಾಗಿ ಮಾಡುವ ರೆಸಿಪಿಗಳು ನಮಗೆ ಸಹಾಯ ಮಾಡುತ್ತದೆ. ನಿಮ್ಮ ಫ್ರಿಡ್ಜ್‌ನಲ್ಲಿ ಕಾಟೇಜ್ ಚೀಸ್ ಅಥವಾ ಪನ್ನೀರ್ ಇದ್ದರೆ, ಅರ್ಧ ಸಮಸ್ಯೆ ಕಳೆದ ಹಾಗೆ. ಪನ್ನೀರ್‌ನಿಂದ ನೀವು ಕಟ್ಲೆಟ್ ಅನ್ನು ತಯಾರಿಸಬಹುದು.
ಬಾಯಿ ಚಪ್ಪರಿಸುವಂತೆ ಮಾಡುವ ಈ ರೆಸಿಪಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಿಸಬಹುದು. ಈ ರೆಸಿಪಿಯನ್ನು ತಯಾರಿಸಲು ಪನ್ನೀರ್‌ನ ಜೊತೆಗೆ ನಿಮಗೆ ಇತರ ಸಾಮಗ್ರಿಗಳೂ ಬೇಕಾಗುತ್ತದೆ. ಹಾಗಾಗಿ, ಈ ಕೆಳಗೆ ನೀಡಿರುವ ಬೇಕಾಗುವ ಸಾಮಗ್ರಿಗಳ ಪಟ್ಟಿ ಮತ್ತು ಮಾಡುವ ನಿಧಾನವನ್ನು ಒಮ್ಮೆ ನೋಡಿ.

*ಪ್ರಮಾಣ- 8 ಮಂದಿಗೆ ಆಗುವಷ್ಟು

*ಸಿದ್ಧತಾ ಸಮಯ – 10 ನಿಮಿಷಗಳು ತಯಾರಿಸುವ ಸಮಯ – 15 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:

ಕಾಟೇಜ್ ಚೀಸ್ (ಪನೀರ್) – 2 ಕಪ್ (ತುರಿದದ್ದು) ಬೇಯಿಸಿರುವ ಅನ್ನ – 1/2 ಕಪ್ (ತಣ್ಣಗಿಂದು) ರುಚಿಗೆ ತಕ್ಕಷ್ಟು ಉಪ್ಪು ಹಸಿ ಮೆಣಸಿನಕಾಯಿ – 1 1/2 ಟೀ ಚಮಚ (ಸಣ್ಣಗೆ ಹೆಚ್ಚಿದ್ದು),ಮೈದಾ – 1/4 ಕಪ್ 6, ಕೊತ್ತಂಬರಿ ಸೊಪ್ಪು – 1/4 ಟೀ ಚಮಚ (ಸಣ್ಣಗೆ ಹೆಚ್ಚಿದ್ದು) , ದಪ್ಪ ಮೆಣಸಿನಕಾಯಿ – 1/2 ಕಪ್ ವಿವಿಧ ಬಣ್ಣದ್ದು (ಸಣ್ಣಗೆ ಹೆಚ್ಚಿದ್ದು), ಬ್ರೆಡ್ ಕ್ರಂಬ್ಸ್ ಅದ್ದುವುದಕ್ಕೆ , ಎಣ್ಣೆ – 2 ಟೇಬಲ್ ಚಮಚ

ಮಾಡುವ ವಿಧಾನ:

ತುರಿದ ಚೀಸ್ ಅನ್ನು ತೆಗೆದುಕೊಂಡು ಅದಕ್ಕೆ ಬೇಯಿಸಿದ ಅನ್ನವನ್ನು ಹಾಕಿ. ಈಗ ಅದಕ್ಕೆ, ಹಿಟ್ಟು ಉಪ್ಪು ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ನಂತರ, ಕೊತ್ತಂಬರಿ ಹೆಚ್ಚಿದ ದಪ್ಪ ಮೆಣಸಿನಕಾಯಿ ಹಾಕಿ. ವಿವಿಧ ಬಣ್ಣಗಳ ಬೆಲ್ ಪೆಪ್ಪರ್ಸ್(ದಪ್ಪ ಮೆಣಸಿನಕಾಯಿ)ಬಳಸಿದರೆ, ಕಟ್ಲೆಟ್ ಅಂದವಾಗಿ ಕಾಣುತ್ತದೆ. ಎಲ್ಲಾ ಸಾಮಗ್ರಿಗಳನ್ನು ಮಿಕ್ಸ್ ಮಾಡಿ ಸಣ್ಣ ಕಟ್ಲೆಟ್ ಅನ್ನು ನಿಮ್ಮ ಕೈಯಿಂದ ಮಾಡಿರಿ. ಈಗ, ಒಂದು ತವ ಬಿಸಿ ಮಾಡಿ ಎಣ್ಣೆಯನ್ನು ಹಾಕಿರಿ. ಕಟ್ಲೆಟ್ಗಳನ್ನು ಅದರ ಮೇಲಿಟ್ಟು ಹೊಂಬಣ್ಣ ಬರುವವರೆಗೂ ಬೇಯಿಸಿ.ಎಲ್ಲಾ ಬದಿಗಳಲ್ಲೂ ಬೆಂದ ನಂತರ, ಬಿಸಿಬಿಸಿಯಾದ ಕಟ್ಲೆಟ್‌ಗಳನ್ನು ಟೊಮೇಟೋ ಸಾಸ್ ಜೊತೆ ಅಥವಾ ಪುದೀನ ಚಟ್ನಿಯ ಜೊತೆ ಸವಿಯಲು ಕೊಡಿ.

LEAVE A REPLY

Please enter your comment!
Please enter your name here