ಬೆಂಗಳೂರು
ಫೇಸ್‍ಬುಕ್‍ನಲ್ಲಿ ಯುವಕನೋರ್ವ ಪಾಕಿಸ್ತಾನ ಸೇನೆ ಪರವಾಗಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಾನು ಪಾಕಿಸ್ತಾನ ಸೈನ್ಯದ ಪರ ನಿಲ್ಲುತ್ತೇನೆ ಎಂದು ಅಬ್ದುಲ್ ಸಲೀಂ ಎಂಬಾತ ಫೇಸ್‍ಬುಕ್‍ನಲ್ಲಿ ಪ್ರಕಟಿಸಿದ್ದ. ಇದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದ್ದು, ಸಲೀಂನ ಸಹೋದರನ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು ಸಾರ್ವಜನಿಕರು ಧ್ವಂಸ ಮಾಡಿದರು.
ದೇಶ ದ್ರೋಹಿ ಅಬ್ದುಲ್ ಸಲೀಂ ಮೇಲೆ ಮಡಿವಾಳ ಪೊಲೀಸರು ಸ್ವಯಂ ದೂರು ದಾಖಲಿಸಿ, ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹಾಗೆಯೇ ಮತ್ತೊಂದೆಡೆ ಆತನ ಸಾಮಾಜಿಕ ಜಾಲತಾಣಗಳ ಪೋಸ್ಟ್, ಆತ ವಾಸ ಮಾಡುತ್ತಿದ್ದ ಮನೆಯನ್ನ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದ್ದು, ಹೀಗಿರುವಾಗ ಇಂತಹ ಪೋಸ್ಟ್ ಹಾಕುವ ವ್ಯಕ್ತಿಗಳ ಮೇಲೆ ನಿಗಾ ಇಡುವಂತೆ ಗುಪ್ತಾಚರ ಇಲಾಖೆ ಸೂಚನೆ ನೀಡಿತ್ತು. ಹಾಗಾಗಿ ಪೊಲೀಸರು ಈತನ ಹಿನ್ನೆಲೆ ಕಲೆ ಹಾಕ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
