ಪಾಕ್ ನಿಂದ 43 ಭಾರತೀಯ ಮೀನುಗಾರರ ಬಂಧನ

0
27

ಕರಾಚಿ: ಅರಬಿಯನ್ ಸಮುದ್ರದಲ್ಲಿ ಅಂತರಾಷ್ಟ್ರೀಯ ಸಮುದ್ರ ಗಡಿ ಉಲ್ಲಂಘಿಸಿದ ಆರೋಪದ ಮೇಲೆ 43 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದಾರೆ ಮತ್ತು ಅವರ ಏಳು ದೋಣಿಗಳನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 43 ಭಾರತೀಯ ಮೀನುಗಾರರನ್ನು ನಿನ್ನೆ ಬಂಧಿಸಲಾಗಿದ್ದು, ಅವರನ್ನು ಡಾಕ್ಸ್ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ ವಕ್ತಾರರು ಹೇಳಿದ್ದಾರೆ.

ಡಾಕ್ಸ್ ಪೊಲೀಸರು ಬಂಧಿತ ಭಾರತೀಯ ಮೀನುಗಾರರನ್ನು ಇಂದು ಜುಡಿಸಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುತ್ತಿದ್ದು, ಅವರನ್ನು ನ್ಯಾಯಾಂಗ ಬಂಧನ ಒಪ್ಪಿಸುವ ಸಾಧ್ಯತೆ ಇದೆ ಎಂದು ಕಮಾಂಡರ್ ವಜೀದ್ ನವಾಜ್ ಜೌಧರಿ ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಕರಾವಳಿ ರಕ್ಷಣಾ ಪಡೆ ಕಳೆದ ಒಂದು ತಿಂಗಳಲ್ಲಿ ಒಟ್ಟು 144 ಭಾರತೀಯ ಮೀನುಗಾರರನ್ನು ಬಂಧಿಸಿದೆ.

LEAVE A REPLY

Please enter your comment!
Please enter your name here