ಪಿಗ್ಗಿಗೆ ಒಲಿದ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಪಟ್ಟ

0
71

ಲಂಡನ್(ಡಿ.8) : ಇಂಗ್ಲೆಂಡಿನ ವಾರ್ಷಿಕ ಸಮೀಕ್ಷೆಯೊಂದರ ಪ್ರಕಾರ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆಯಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೊರಹೊಮ್ಮಿದ್ದಾರೆ.

ಂಡನ್ ಮೂಲದ ವಾರ ಪತ್ರಿಕೆ ಈಸ್ಟರ್ನ್ ಐ ನಡೆಸಿದ 50 ಟಾಪ್‌ ಸೆಕ್ಸಿ ಏಷಿಯನ್‌ ಮಹಿಳೆಯರ ಪಟ್ಟಿಯಲ್ಲಿ ಸತತ 5ನೇ ವರ್ಷ ಪ್ರಿಯಾಂಕಾ ಚೋಪ್ರಾ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ಒಂದನೇ ಸ್ಥಾನ ದೀಪಿಕಾ ಪಡುಕೋಣೆ ಪಾಲಾಗಿತ್ತು.

ಈ ವರ್ಷ ದೀಪಿಕಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಕ್ರೆಡಿಟ್ ಅನ್ನು ನಾನು ನನ್ನ ತಂದೆ-ತಾಯಿ ಮತ್ತು ನಮ್ಮ ಪೂರ್ವಜರಿಗೆ ನೀಡಲು ಬಯಸುತ್ತೇನೆ ಎಂದಿರುವ ಪ್ರಿಯಾಂಕ ಇದೇ ಸಂದರ್ಭದಲ್ಲಿ ಆನ್ ಲೈನ್ ಸಮೀಕ್ಷೆಯಲ್ಲಿ ಮತ ಹಾಕಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ನನ್ನ ಈ ಗೆಲುವಿನಿಂದ ನಾನು ಕೃತಜ್ಞಳಾಗಿದ್ದೇನೆ ಎಂದಿದ್ದಾರೆ. ಪ್ರಿಯಾಂಕಾ ನಂತರ ಎರಡನೇ ಸ್ಥಾನದಲ್ಲಿ ಭಾರತೀಯ ಟಿವಿ ನಟಿ ನಿಯಾ ಶರ್ಮಾ ಇದ್ದು, ಆಲಿಯಾ ಭಟ್‌ ಹಾಗೂ ಪಾಕ್‌ ನಟಿ ಮಹಿರಾ ಖಾನ್‌ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here