ಪೆಟ್ರೋಲ್ ಡೀಸೆಲ್ ಧರ ಏರಿಕೆ ಖಂಡಿಸಿ: ರಾಜ್ಯ ಹಸಿರು ಸೇನೆ, ರೈತಸಂಘ ರಸ್ತೆ ತಡೆ

ಹರಪನಹಳ್ಳಿ:

  ಪೆಟ್ರೋಲ್ ಡೀಸೆಲ್ ಹಾಗೂ ಸಿಲೆಂಡರ್ ಧರವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ರಸ್ತೆ ತಡೆ ನೆಡೆಸಿ ಪ್ರತಿಭಟನೆ ಮಾಡಿದರು.
ಪಟ್ಟಣದ ಹಿರೆಕೆರೆ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಇಜಾರಿ ಸಿರಸಪ್ಪ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ನೆಡೆಸಿದರು. ಕೆಲಕಾಲ ರಸ್ತೆ ಸಂಚಾರಕ್ಕೆ ತಡೆಯುಂಟಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

  ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ ಮಾತನಾಡಿ. ಗಗನಕ್ಕೇರುತ್ತಿರುವ ಧರಗಳಿಂದ ಬಡ ಜನತೆಗೆ ತೀರ್ವ ಆರ್ಥಿಕ ಹೊರೆಯಾಗುತ್ತಿದ್ದು, ಹೊರೆಯನ್ನು ಹೋರುವಂತಹ ಸ್ಥಿತಿ ನಿರ್ಮಾಣ ಮಾಡಿರುವ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸುತ್ತೇವೆ. ಬಡವರು ಕೂಲಿಕಾರ್ಮಿಕರಿಗೆ ಅನುಕೂಲವಾಗುವಂತೆ ಕೂಡಲೇ ಪೆಟ್ರೋಲ್, ಡೀಸಲ್ ಹಾಗೂ ಅನಿಲ ಧರವನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಉಘ್ರವಾದ ಹೋರಾಟಕ್ಕೆ ಸಂಘಟನೆ ಮುಂದಾಗಲಿದೆ ಎಂದು ಎಚ್ಚರಿಸಿದರು.

  ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ, ರೈತ ಮುಖಂಡರಾದ ಅರಸನಾಳು ಯಲ್ಲಪ್ಪ, ತಲವಾಗಲು ಕರಿಯಪ್ಪ, ಮಾಚಿಹಳ್ಳಿ ತಾಂಡದ ಕುಮಾರನಾಯ್ಕ್, ಸೂರ್ಯನಾಯ್ಕ್, ಬೇವಿನಳ್ಳಿ ಹಾಲೇಶಪ್ಪ, ಬೇವಿನಳ್ಳಿ ಬಸವರಾಜ್, ಹನುಮಂತಪ್ಪ, ಯಂಕಪ್ಪ, ಯಲ್ಲಪ್ಪ, ಶಶಿನಾಯ್ಕ್, ಪಕ್ಕೀರಪ್ಪ, ವರದಹಳ್ಳಿ ಸಿದ್ದಣ್ಣ, ಕೊರಚರಹಟ್ಟಿ ಕೆಂಚಪ್ಪ, ವಸಂತಪ್ಪ, ಮೂಲಿಮನಿ ರೆಹಮಾನ್, ಬಿಕ್ಕಿಹಳ್ಳಿ ಕೆಂಚಪ್ಪ ಹಾಗೂ ಇತರರು ಭಾಗವಹಿಸಿದ್ದರು.