ಬೆಂಗಳೂರು:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಹೆಚ್ಚುವರಿ ವಿಶೇಷ ಪ್ರಾಸಿಕ್ಯೂಟರ್ ಸ್ಥಾನಕ್ಕೆ ವಕೀಲೆ ಜಯನಾ ಕೊಠಾರಿ ರಾಜೀನಾಮೆ ನೀಡಿದ್ದಾರೆ. ಗೃಹ ಇಲಾಖೆಯ ಉಪಕಾರ್ಯದರ್ಶಿಗೆ ಜಯನಾ ಕೊಠಾರಿ ತಮ್ಮ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತಂದೆ ಶಾಸಕ ಹೆಚ್ ಡಿ ರೇವಣ್ಣ ಬಂಧನಕ್ಕೊಳಗಾಗಿದ್ದಾಗ ಅವರಿಗೆ ಜಾಮೀನು ನೀಡಬಾರದೆಂದು ಜಯನಾ ಕೊಠಾರಿ ಪ್ರಬಲ ವಾದ ಮಂಡಿಸಿದ್ದರು.