ಪ್ರಧಾನಿ ಮೋದಿ ಹತ್ಯಗೆ ಸಂಚು : ಶಂಕಿತ ಇಬ್ಬರು ಉಗ್ರರ ಬಂಧನ 

ಸ್ಪೋಟಕ ಮಾಹಿತಿ ಬಿಚ್ಚಿಟ್ಟ E-Mail , ಎನ್.ಐ.ಎ ಅಧಿಕಾರಿಗಳಿಂದ ತನಿಖೆ
ದೆಹಲಿ/ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಪೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಮೋದಿ ಅವರಿಗೆ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನು, ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ದೆಹಲಿ ಪೊಲೀಸರಿಗೆ ಮತ್ತು ಮುಂಬೈನಲ್ಲಿರುವ ನ್ಯಾಷನಲ್ ಇನ್ವೇಷ್ಟಿಗೇಶನ್ ಸಂಸ್ಥೆಗೆ ಇ-ಮೇಲ್ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.
ನಿವೃತ್ತ ಪೊಲೀಸ್ ಸೇರಿ ಇಬ್ಬರ ಬಂಧನ 
ಬಿಹಾರದ ಪಾಟ್ನಾದಲ್ಲಿ ಶಂಕಿತ ಭಯೋತ್ಪಾದಕರ ತಂಡವನ್ನು ಭೇದಿಸಲಾಗಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಪೊಲೀಸರ ದಾಳಿಯ ವೇಳೆ 8 ಪುಟಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಬೇಕೆಂಬುದರ ಬಗ್ಗೆ ಬರೆಯಲಾಗಿದೆ. ಇದುವರೆಗೆ ಮೊಹಮ್ಮದ್ ಜಲಾವುದ್ದೀನ್ ಮತ್ತು ಅತ್ತರ್ ಪರ್ವೇಜ್ ಎಂಬ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಬಂಧಿತರಾಗಿರುವ ಜಲಾವುದ್ದೀನ್ ಜಾರ್ಖಂಡ್​ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಇ-ಮೈಲ್’ನಿಂದ ಸ್ಪೋಟಕ ಮಾಹಿತಿ 
ಪ್ರಧಾನಿ ಮೋದಿ ಹತ್ಯೆಗೆ ಬರೋಬ್ಬರಿ 20 ಕೆಜಿ ಆರ್‌ ಡಿ ಎಕ್ಸ್‌ ನೊಂದಿಗೆ ಸ್ಲೀಪರ್ ಸೆಲ್ ಮೂಲಕ ಕೊಲ್ಲಲು ಸಂಚು ರೂಪಿಸಲಾಗಿದೆ ಎಂಬ ಎಚ್ಚರಿಕೆಯ ಇ-ಮೇಲ್  ಒಂದು ಬಂದಿದೆ ಎಂದು ಸೆಕ್ಯೂರಿಟಿ ಏಜೆನ್ಸಿ ಮಾಹಿತಿ ನೀಡಿದೆ. ಸದ್ಯ ಈ ಇ-ಮೇಲ್ ದೆಹಲಿ ಪೊಲೀಸ್ ಆಯುಕ್ತರಿಗೆ ತಲುಪಿದ್ದು, ಇ ಮೇಲ್ ಸಂದೇಶ ಬಂದ ಕೂಡಲೇ ಪ್ರಧಾನಿ ಮೋದಿ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಅನಾಮಧೇಯ ವ್ಯಕ್ತಿಯಿಂದ ಮುಂಬೈ ನಲ್ಲಿರುವ ನ್ಯಾಷನಲ್ ಇನ್ವೇಷ್ಟಿಗೇಶನ್ ಸಂಸ್ಥೆಗೂ ಮೇಲ್ ರವಾನಿಸಲಾಗಿದೆ.
ಇ-ಮೇಲ್​ನಲ್ಲಿರುವ ಸ್ಪೋಟಕ ಮಾಹಿತಿ ಏನು?
ಹಲೋ ಎಲ್ಲರೂ ಇಲ್ಲಿ ಕೇಳಿ. ನನ್ನ ಬಳಿ 20ಕ್ಕೂ ಹೆಚ್ಚು ಆರ್​ಡಿಎಕ್ಸ್​ಗಳು ಇವೆ. 20 ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ಮಾಡಲು ಪ್ಲಾನ್ ರೂಪಿಸಿದ್ದೇನೆ. ಅದೂ ಕೂಡ ಪ್ರಮುಖ ನಗರಗಳಲ್ಲಿ. ನಾನು ಪ್ರಧಾನಿ ಮೋದಿಯನ್ನ ಕೊಲ್ಲಲು ನಿಶ್ಚಯಿಸಿದ್ದೇನೆ. ನಾನು ಅದನ್ನ ಮಾಡುತ್ತೇನೆ. ಮೋದಿ ನನ್ನ ಜೀವನವನ್ನ ಹಾಳು ಮಾಡಿದ್ದಾರೆ. ನಾನು ಯಾರನ್ನೂ ಬಿಡುವುದಿಲ್ಲ.
ನಾನು ಸರಿಸುಮಾರು 2 ಲಕ್ಷ ಮಂದಿಯನ್ನ ಕೊಲ್ಲುತ್ತೇನೆ. ನನ್ನ ಬಾಂಬ್​’ನಿಂದ ಜನರು ಸತ್ತರೆ ಅವರೂ ಕೂಡ ಸಾಯುತ್ತಾರೆ. ನಾನು ಈಗಾಗಲೇ ಕೆಲವು ಉಗ್ರರನ್ನ ಭೇಟಿ ಮಾಡಿದ್ದೇನೆ. ಅವರು ನನಗೆ ಆರ್​ ಡಿ ಎಕ್ಸ್​ ಪಡೆಯಲು ಸಹಾಯ ಮಾಡಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದೂ ಈ ವಿಚಾರದಲ್ಲಿ ನನಗೆ ಖುಷಿ ಇದೆ. ನಾನು ಎಲ್ಲ ಕಡೆಯೂ ಬ್ಲಾಸ್ಟ್​ ಮಾಡಿಯೇ ಮಾಡುತ್ತೇನೆ. ನೀವು ನನ್ನನ್ನ ತಡೆಯಬಹುದು, ಆದರೆ ಪ್ಲಾನ್ ಈಗಾಗಲೇ ರೆಡಿಯಾಗಿದೆ ಎಂದು ಬರೆದಿದ್ದಾನೆ ಎನ್ನಲಾಗಿದೆ.
ಮೋದಿಗೆ ಭದ್ರತೆ ಹೆಚ್ಚಳ 
ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದು ಬಹಿರಂಗವಾದ ನಂತರ ಭದ್ರತಾ ಪಡೆಗಳು ಎಚ್ಚೆತ್ತುಕೊಂಡಿದ್ದು, ಇಮೇಲ್ ಕಳುಹಿಸಿದವರನ್ನು ಪತ್ತೆ ಮಾಡಲು ಆರಂಭವಾಗಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರತಾ ಪಡೆಗಳು ಹೆಚ್ಚಿನ ಭದ್ರತೆಯನ್ನು ಒದಗಿಸಿದೆ.
ತನಿಖೆ ಆರಂಭ 
ಸದ್ಯ ಭಯೋತ್ಪಾದಕರ ಕಳುಹಿಸಿದ ಈ-ಮೇಲ್​ ಅನ್ನ ಮುಂಬೈನ ರಾಷ್ಟ್ರೀಯ ತನಿಖಾ ತಂಡಕ್ಕೆ ಸೆಕ್ಯೂರಿಟಿ ಏಜೆನ್ಸಿ ನೀಡಿದೆ. ಆದರೆ ಈ ಮೇಲ್ ಎಷ್ಟು ನಿಜ, ಅದನ್ನು ಎಲ್ಲಿಂದ ಕಳುಹಿಸಲಾಗಿದೆ? ಅನ್ನುವುದರ ಬಗ್ಗೆ ಸರಿಯಾದ ಮಾಹಿತಿ ಈವರೆಗ ಲಭ್ಯವಾಗಿಲ್ಲ. ಆದರೂ ಸದ್ಯ ಎನ್​ ಐ ಎ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.