ಪ್ರಿಯಾಂಕ್‌ ಖರ್ಗೆಯನ್ನು ಲೇವಡಿ ಮಾಡಿದ ಬಿಜೆಪಿ…!

ಬೆಂಗಳೂರು

    ಸ್ವಂತಕ್ಕೆ ಮತ್ತು ಕುಟುಂಬಕ್ಕಾಗಿ ಮಾತ್ರವೇ “ದುಡಿಯುತ್ತಾ”, ಅಂಥದ್ದೇ ಪಕ್ಷದ ಸಂಸ್ಕಾರ ಪಡೆದ ಪ್ರಿಯಾಂಕ್ ಖರ್ಗೆ ಅವರಿಗೆ ಇತರರನ್ನು ಉದ್ಧಾರ ಮಾಡುವುದು ಬಿಡಿ, ಅದನ್ನು ಊಹಿಸಿಕೊಳ್ಳುವುದು ಸಹ ಸಾಧ್ಯವಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಪ್ರಚಾರ ಗಿಟ್ಟಿಸಿಕೊಳ್ಳಲು ಆಗಾಗ ರಾಷ್ಟçಭಕ್ತ ಸಂಘಟನೆಗಳನ್ನು ಎಳೆದು ತರಬೇಕಾಗಿರುವ ದಯನೀಯ ಸ್ಥಿತಿಗೆ ಇವರು ತಲುಪಿಬಿಟ್ಟರಲ್ಲಾ! ಛೇ ಎಂದು ಕಾಲೆಳೆದಿದೆ. ಸಿಎಂ-ಡಿಸಿಎA ಅವರ ವೈಯಕ್ತಿಕ ಹಿತಾಸಕ್ತಿಯ ಮೇಲಾಟದಲ್ಲಿ ರಾಜ್ಯದ ರೈತರ ಬದುಕು ದುರ್ಬರವಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಬಣಗಳ ಜಗಳ..!

ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!
ಜಿ.ಪರಮೇಶ್ವರ್
ಡಿ.ಕೆ.ಶಿವಕುಮಾರ್
ಮಲ್ಲಿಕಾರ್ಜುನ್ ಖರ್ಗೆ
ಎಂ.ಬಿ.ಪಾಟೀಲ್

ಚುನಾವಣೆ ನಂತರ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!
ಹೆಚ್.ಸಿ.ಮಹದೇವಪ್ಪ
ಬಿ.ಕೆ.ಹರಿಪ್ರಸಾದ್
ಕೆ.ಎನ್.ರಾಜಣ್ಣ
ಸತೀಶ್ ಜಾರಕಿಹೊಳಿ
ಜಮೀರ್ ಅಹ್ಮದ್ ಖಾನ್ ಎಂದು ಬಿಜೆಪಿ ಕುಟುಕಿದೆ.

ರಾಜ್ಯದಲ್ಲಿ ಬರಗಾಲ ಬಂದಿದೆ ಕುಡಿಯಲು ನೀರಿಲ್ಲ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದ್ಯಾವುದರ ಚಿಂತೆ ಇಲ್ಲದ ಎಟಿಎಂ ಸರ್ಕಾರ ಸಂತೆಯಲ್ಲಿ ಬೀದಿ ಜಗಳ ಮಾಡುತ್ತಾ ಕರ್ನಾಟಕವನ್ನು ಬಲಿಕೊಡುತ್ತಿದೆ ಎಂದು ಟೀಕಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap