ಬರಲಿವೆ ಮಡಚುವ ಫೋನ್’ಗಳು : ಏನಿವೆ ಗೊತ್ತಾ ಇದರ ವೈಶಿಷ್ಟ್ಯಗಳು

0
25

ಆ್ಯಪಲ್ ಕಂಪನಿಯ ಐಫೋನ್ 10 ಫೋನ್ ಬರುತ್ತಿದೆ ಅಂತ ಸುದ್ದಿ ಬಂದಾಗಲೇ ವಿಶ್ವಾದ್ಯಂತ ಇರುವ ಐಫೋನ್ ಪ್ರಿಯರ ಕಿವಿ ನೆಟ್ಟಗಾಗಿತ್ತು. ಹೇಗಾದರೂ ಮಾಡಿ ಐಫೋನ್ 10 ಖರೀದಿಸಲೇಬೇಕು ಅಂತ ಯೋಜನೆ ಹಾಕಿಕೊಂಡವರ ಸಂಖ್ಯೆ ದೊಡ್ಡದೇ ಇದೆ.

ವಿಷಯ ಯಾರ ತಲೆಕೆಡಿಸಿತ್ತೋ ಇಲ್ಲವೋ ಆದರೆ ಸ್ಯಾಮ್‌ಸಂಗ್ ಮಾತ್ರ ಆ ಸಂಗತಿ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿತ್ತು. ಈಗ ಅವರ ಯೋಚನೆಗೆ ಫಲ ಸಿಕ್ಕಿದೆ. ಸ್ಯಾಮ್‌ಸಂಗ್ ಕಂಪನಿ ಐಫೋನ್ 10 ಅನ್ನು ಎದುರಿಸಲು ಸನ್ನದ್ಧವಾಗಿದೆ. ಐಫೋನ್ 10 ವಿರುದ್ಧ ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್‌10 ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದೆ. ಈ ಪ್ಲಾನ್ ನಿಜವಾಗಿಯೇ ಕೈಗೂಡುವುದೇ ಆದರೆ ಆ್ಯಪಲ್ ತಲೆಕೆಡಿಸಿಕೊಳ್ಳಲೇಬೇಕು.

ಯಾಕೆಂದರೆ ಸ್ಯಾಮ್‌ಸಂಗ್ ಮಡಚಬಹುದಾದ ಸ್ಮಾಟ್ ಫೋರ್ನ್ ಅನ್ನು ಆವಿಷ್ಕರಿಸಲಿದೆ. ಮಡಚಬಹುದಾದ ಅಂದ್ರೆ ಫೋಲ್ಡೇಬಲ್ ಸ್ಮಾರ್ಟ್‌ಫೋನ್. ಈ ಫೋನನ್ನು ನೀವು ನಾನಾ ರೀತಿಗಳಲ್ಲಿ ಮಡಚಬಹುದು. ಅಗತ್ಯಕ್ಕೆ ತಕ್ಕಂತೆ ದೊಡ್ಡದಾಗಿ, ಚಿಕ್ಕದಾಗಿ ಮಾಡಿಕೊಳ್ಳಬಹುದಾದ ಸೌಲಭ್ಯ ಇದರಲ್ಲಿ ಇದೆ. ಅದೂ ಅಲ್ಲದೇ ಇನ್ನೂ ಹಲವಾರು ಹೊಸ ತಂತ್ರಜ್ಞಾನಗಳನ್ನು ಇದು ಹೊಂದಿದ್ದು, ಈ ಬಗ್ಗೆ ಕಂಪನಿ ಪೂರ್ಣ ವಿವರಗಳನ್ನು ನೀಡಿಲ್ಲ. ಸುಮಾರು ಆರು ವರ್ಷಗಳಿಂದ ಇಂಥದ್ದೊಂದು ಫೋನ್ ಅನ್ನು ಆವಿಷ್ಕರಿಸುವ ಪ್ಲಾನ್ ಅನ್ನು ಸ್ಯಾಮ್‌ಸಂಗ್ ಹಾಕಿಕೊಂಡಿತ್ತು.

LEAVE A REPLY

Please enter your comment!
Please enter your name here