ಬಾಲ್ಯ ವಿವಾಹ ತಡೆಗೆ ಜಾಗೃತಿ ಅಗತ್ಯ

ಹಾವೇರಿ
 
      ಬಾಲ್ಯವಿವಾಹಗಳಿಂದ ಹೆಣ್ಣು ಮಕ್ಕಳು ತೊಂದರೆ ಅನುಭವುಸುತ್ತಿದ್ದಾರೆ. ಸಮಾಜದ ಇಂತಹ ಅನಿಷ್ಠ ಪದ್ಧತಿ ನಿರ್ಮೂಲನೆಗಾಗಿ ಶಿಕ್ಷಕರು ಮಕ್ಕಳಿಗೆ ಅರಿವು ಮತ್ತು ಜಾಗೃತಿಯ ಶಿಕ್ಷಣವನ್ನು ನೀಡಬೇಕು ಜೊತೆಗೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆಗೆ ಸಮಾಜವು  ಕೈ ಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹೇಳಿದರು
 
       ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ  ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಆಯೊಜಿಸಲಾದ ಪೋಕ್ಸ ಕಾಯ್ದೆ 2012 ಹಾಗೂ ಬಾಲ್ಯವಿವಾಹ ಕಾಯ್ದೆ 2006 ಕುರಿತು ಎಲ್ಲಾ ಶಾಲೆಯ ಮುಖ್ಯೋಪಾಧ್ಯಯರು,ದೈಹಿಕ ಶಿಕ್ಷಕರು ಮತ್ತು ಮಹಿಳಾ ಶಿಕ್ಷಕಿಯರಿಗೆ ಒಂದು ದಿನದ ಸಾಮಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉಧ್ಘಾಟಿಸಿ  ಅವರು ಮಾತನಾಡಿದರು
 
     ಶಿಕ್ಷಣ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ  ಹೆಣ್ಣು ಮಕ್ಕಳಿಗೆ 8 ರಿಂದ 9 ವರ್ಷದೊಳಗೆ ಬಾಲ್ಯವಿವಾಹ ಮಾಡುತ್ತಾರೆ. ಇದರಿಂದ ಮಕ್ಕಳ ಕನಸು ಬತ್ತಿ ಹೋಗುತ್ತವೆ,  ಅವರ  ಭವಿಷ್ಯ  ಹಾಳಾಗತ್ತ್ತದೆ. ಈ ಕುರಿತಂತೆ ಅರಿವು ಮತ್ತು ಜಾಗೃತಿ ಮೂಡಿಸುವುದರ ಮೂಲಕ ಈ ಸಮುದಾಯದಲ್ಲಿ ಬದಲಾವಣೆ ತರಲು ಮುಂದಾಗಬೇಕು ಎಂದು ಹೇಳಿದರು.
      ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು. 
      ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಅಂದಾನೆಪ್ಪ ವಡಗೇರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಮಜೀದ ಎಸ್ ಅವರು ಮಾತನಾಡಿದರು. ಮಕ್ಕಳ ವಿಶೇಷ ಪೋಲಿಸ ಘಟಕ ಪೋಲಿಸ ಇಲಾಖೆಯ ಎಂ.ಆರ್ ಜಾಲಾಗಾರ,ಆಶಾಕಿರಣ ರೂರಲ್ ಡೆವಲಪ್‍ಮೇಂಟ ಸೊಸೈಟಿಯ ಅಧ್ಯಕ್ಷ ಮುತ್ತುರಾಜ ಮಾದರ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಮಾಗಿ.ಎಮ್.ಎಚ್.ಪಾಟೀಲ್ ಹಾಗೂ ವಿನಯ. ಎಸ್.ಗುಡಗೂರ ಶ್ರೀಮತಿ ಮಂಗಳಾ ಅಳಗುಂಡಿ ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link