ಬೆಂಗಳೂರು
ನಗರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಸಲೀಂ ನಾನು ಮಾಡಬಾರದ ತಪ್ಪು ಮಾಡಿದ್ದು ನಾನು ಮತ್ತು ನನ್ನ ಕುಟುಂಬವನ್ನು ಯಾರು ರಕ್ಷಿಸುತ್ತಾರೆ ಎಂದು ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡಿದ್ದಾನೆ.
ಕೇರಳ ಮೂಲದ ಉಗ್ರ ಸಲೀಂನನ್ನು ಸಿಸಿಬಿ ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಕೃತ್ಯದ ಮಹತ್ವದ ಮಾಹಿತಿ ನೀಡಿದ್ದು ನನಗೆ ಯಾರು ರಕ್ಷಣೆ ನೀಡುತ್ತಾರೆ ಎನ್ನುತ್ತಾ ಕಣ್ಣೀರಿಟ್ಟಿದ್ದಾನೆ.
ಕಳೆದ ಜುಲೈ 25, 2008 ರಲ್ಲಿ ನಗರದ ಮಡಿವಾಳ, ಆಡುಗೋಡಿ, ಕೋರಮಂಗಲ, ಮಲ್ಯ ಆಸ್ಪತ್ರೆ ಬಳಿ ಸೇರಿ ಒಂಭತ್ತು ಕಡೆಗಳಲ್ಲಿ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಲೀಂಪ್ರಮುಖ ರೂವಾರಿಯಾಗಿದ್ದಾನೆ.
ವಿಚಾರಣೆಯಲ್ಲಿ ಸಲೀಂ ನಗರದಲ್ಲಿ ಸರಣಿ ಬಾಂಬ್ ಸ್ಪೋಟ ಮಾಡಿಸಿದ್ದು ನಾನೇ. ಬಾಂಬ್ ತಯಾರಿ ಮಾಡಿದ್ದೂ ನಾನೇ ಎಂದು ಸಿಸಿಬಿ ಪೊಲೀಸರ ಮುಂದೆ , ಧರ್ಮ ರಕ್ಷಣೆಗಾಗಿ ನಾನು ಈ ಕೃತ್ಯಕ್ಕೆ ಕೈ ಹಾಕಿದೆ. ಆದರೆ ನನ್ನನ್ನು ನನ್ನ ಮಕ್ಕಳನ್ನ ಯಾರು ಕಾಪಾಡುತ್ತಾರೆ ಪೊಲೀಸರ ಮುಂದೆ ಸಲೀಂ ಅಳಲು ತೋಡಿಕೊಂಡಿದ್ದಾನೆ.
ಕಳೆದೆರಡು ದಿನದ ಹಿಂದೆ ಸಲೀಂನನ್ನ ಮಹಜರ್‍ಗಾಗಿ ಸಿಸಿಬಿ ಪೊಲೀಸರು ಕೇರಳದ ಕಣ್ಣೂರಿಗೆ ಕರೆದೊಯ್ದಿದ್ದು, ಈ ವೇಳೆ ತನ್ನ ಮಕ್ಕಳನ್ನ ಬಿಗಿದಪ್ಪಿ, ಪೊಲೀಸರ ಮುಂದೆ ಸಲೀಂ ಅಳುತ್ತಾ ಗೋಗರೆದಿದ್ದಾನೆ. ಸಲೀಂಗೆ ನಾಲ್ಕು ಮಕ್ಕಳಿದ್ದು, ಒಂದು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೂವರು ಹೆಣ್ಣುಮಕ್ಕಳ ಪೈಕಿ ಹಿರಿ ಮಗಳ ಮದುವೆಗೆ ಸಲೀಂ ತಯಾರಿ ನಡೆಸಿದ್ದನು ಪೊಲೀಸ್ ಕಸ್ಟಡಿ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿ ಪೊಲೀಸರು ನಾಳೆ ಕೋರ್ಟ್‍ಗೆ ಹಾಜರು ಪಡಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ