ಬೆಂಗಳೂರು
ಬಿಬಿಎಂಪಿ ಕಾರ್ಪೋರೇಟರ್ ಅನ್ಸರ್ ಪಾಷಾ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬಳು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬನಶಂಕರಿ ಬಳಿ ನಡೆದಿದೆ.
ನಗರದ ವಾರ್ಡ್ ನಂಬರ್ 180ರ ಕಾರ್ಪೋರೇಟರ್ ಅನ್ಸರ್ ಪಾಷಾರ ವಿರುದ್ಧ ಕಿರುಕುಳ ಆರೋಪ ಮಾಡಿ ಆಯೇಷಾ ಆತ್ಮಹತ್ಯೆಗೆ ಯತ್ನಿಸಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಫಿ ಎಂಬುವವರನ್ನು ಆಯೇಷಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪತಿ ಶಫಿಯವರ ತಂದೆ ನಯಾಝ್ ಸೊಸೆಗೆ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದರು.ಪತಿಯಿಂದ ವಿಚ್ಛೇದನ ಕೊಡಿಸಲು ಮಾವ ಮುಂದಾಗಿದ್ದರು. ಇದಕ್ಕೆ ಕಾರ್ಪೋರೇಟರ್ ಅನ್ಸರ್ ಪಾಷಾ ಕೂಡ ಸಾಥ್ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ.
ಆದರೆ ದಾರ್-ಉಲ್-ಖ್ವಾಜಾ ಎಂಬ ಇಸ್ಲಾಮಿಕ್ ಕೋರ್ಟ್‍ನಲ್ಲಿ ವಿಚ್ಛೇದನ ಪ್ರಕರಣ ಸಂಧಾನದಲ್ಲಿ ಅಂತ್ಯವಾಗಿತ್ತು. ನಂತರ ಭೂಗತ ಪಾತಕಿಯೊಬ್ಬನನ್ನು ಬಿಟ್ಟು ಪತಿ ಶಫೀಯನ್ನು ಕಾರ್ಪೋರೇಟರ್‍ಅಪಹರಿಸಿ ಹಲ್ಲೆ ಮಾಡಿಸಿದ್ದಾರೆ ಎಂದು ಆಯೇಷಾ ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸುವುದಕ್ಕೂ ಮುನ್ನ ಆಯೇಷಾ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಕಾರ್ಪೋರೇಟರ್ ವಿರುದ್ಧ ಆರೋಪಿಸಿದ್ದಾರೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
