ಬೆಂಗಳೂರು: ಐಟಿ ಮತ್ತು ಬಿಟಿ ವಲಯಗಳಲ್ಲಿ ಬೆಂಗಳೂರು ಪ್ರಸ್ತುತ ಸಾಧಿಸಿರುವ ಅಗಾಧ ಬೆಳವಣಿಗೆಗೆ ಸಿಂಗಾಪುರ ಮಾದರಿಯಾಗಿದ್ದು, ಅಗತ್ಯ ಪ್ರೇರಣೆ ನೀಡುತ್ತ ಬಂದಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬ್ರಿಗೇಡ್ ಸಮೂಹವು ಸಿಂಗಾಪುರದ ವೆಂಚರ್ ಕ್ಯಾಪಿಟಲ್ ಸಂಸ್ಥೆ ಎಐಸಿ ಜತೆಗೂಡಿ ಕುಂದಲಹಳ್ಳಿಯ ಐಟಿಪಿಎಲ್‌ನಲ್ಲಿ ನಿರ್ಮಿಸಿರುವ ಬ್ರಿಗೇಡ್ ಟೆಕ್ ಗಾರ್ಡನ್ ಕಚೇರಿಯನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸುಸ್ಥಿರತೆ, ಗುಣಮಟ್ಟ ಮತ್ತು ಉತ್ಕೃಷ್ಟತೆ ಇಂದಿನ ಅಭಿವೃದ್ಧಿಯಲ್ಲಿ ಆಧಾರಸ್ತಂಭಗಳಾಗಿವೆ. ಸಿಂಗಪುರ ಮತ್ತು ಬೆಂಗಳೂರಿನ ಸಂಬಂಧ ಮೊದಲಿನಿಂದಲೂ ಸೌಹಾರ್ದದಿಂದ ಕೂಡಿದೆ. ಈಗಾಗಲೇ ನಗರದಲ್ಲಿ ಹಲವು ಹೆಗ್ಗುರುತುಗಳನ್ನು ಹೊಂದಿರುವ ಬ್ರಿಗೇಡ್ ಸಮೂಹವು ನಮ್ಮಲ್ಲಿ ನಾವೀನ್ಯತಾ ಕೇಂದ್ರ ವನ್ನು ಸ್ಥಾಪಿಸುವುದು ಅಗತ್ಯವಾಗಿದೆ.
ಕರ್ನಾಟಕ ಮತ್ತು ಬೆಂಗಳೂರು ಅತ್ತುತ್ತಮ ಹೂಡಿಕೆ ತಾಣವಾಗಿದ್ದು, ಸಿಂಗಪುರದ ಉದ್ಯಮಿಗಳು ಇದನ್ನು ಉಪಯೋಗಿಸಿ ಕೊಳ್ಳಬೇಕು ಎಂದು ಅವರು ಹೇಳಿದರು.
ಬೆಂಗಳೂರನ್ನು ಮತ್ತಷ್ಟು ಆಕರ್ಷಕವಾಗಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮೆಟ್ರೋ ಮತ್ತು ಸಬರ್ಬನ್ ರೈಲ್ವೆ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ ಎಂದು ಅವರು ನುಡಿದರು.
ಸಚಿವರು ಇದೇ ಸಂದರ್ಭದಲ್ಲಿ ಬೆಂಜ್ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಮೂಲಸೌಲಭ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ,
ಬ್ರಿಗೇಡ್ ಟೆಕ್ ಗಾರ್ಡನ್ಸ್ ಮುಖ್ಯಸ್ಥ ಜಯಶಂಕರ್, ಮಾಧವ್, ಆ್ಯಂಡಿ ಮುಂತಾದವರು ಇದ್ದರು.
ಬ್ರಿಗೇಡ್ ಟೆಕ್ ಗಾರ್ಡನ್ಸ್ ನ ನೂತನ ಕಚೇರಿಯನ್ನು ಐಟಿ & ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಗುರುವಾರ ಉದ್ಘಾಟಿಸಿದರು. ಜತೆಯಲ್ಲಿ ಅರವಿಂದ ಲಿಂಬಾವಳಿ, ಜಯಶಂಕರ್, ಆ್ಯಂಡಿ ಮುಂತಾದವರು