ಬೆಂಗಳೂರಿನ ರಸ್ತೆಗಳಲ್ಲಿ ಕಂಡಕಂಡ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ ಫುಡ್ ಡೆಲಿವರಿ ಬಾಯ್​ ಅರೆಸ್ಟ್​..!

ಬೆಂಗಳೂರು : ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲೂ ದಿನದಿಂದ ದಿನಕ್ಕೆ ಕಾಮುಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾಮುಕರ ದುರ್ವರ್ತನೆಗೆ ಬ್ರೇಕ್ ಹಾಕಲು ಮುಂದಾಗಿರುವ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ತಡೆಗಟ್ಟಲು ಜಾಗೃತಿ ಮೂಡಿಸುತ್ತಿದ್ದರೂ ಹೆಣ್ಣು ಮಕ್ಕಳಿಗೆ ಕಾಮುಕರ ಕಾಟ ಮಾತ್ರ ತಪ್ಪಿಲ್ಲ. ವಾಕಿಂಗ್ ಹಾಗೂ ಸೈಕ್ಲಿಂಗ್ ಮಾಡುತಿದ್ದ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.
ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಕಾಮುಕರ ಕಾಟ. ಹೆಣ್ಣು ಮಕ್ಕಳು ಹಗಲಿನಲ್ಲಿ ಧೈರ್ಯವಾಗಿ ರಸ್ತೆಗಳಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಹೈಫೈ ಏರಿಯಾ ಏನಿಸಿಕೊಂಡಿರುವ ಸದಾಶಿವನಗರದಲ್ಲಿ ಕಾಮುಕನೊಬ್ಬ ವಾಕಿಂಗ್​ ಹಾಗೂ ಸೈಕ್ಲಿಂಗ್​ ಮಾಡುತ್ತಿದ್ದ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿ ಈಗ ಕಂಬಿಹಿಂದೆ ಸೇರಿದ್ದಾನೆ.
ವಾಕಿಂಗ್ ಮಾಡುವ ಯುವತಿಯರಿಗೆ ಲೈಂಗಿಕ ಕಿರುಕುಳ :
ಫುಡ್​ ಡೆಲಿವರಿ ಮಾಡುವ ವ್ಯಕ್ತಿಯಂತೆ ಕಾಣುವ ಈತ ಇದೇ ತಿಂಗಳ 3ರಂದು ಬೆಳಿಗ್ಗೆ  7:30ರ ಸುಮಾರಿಗೆ ಸದಾಶಿವನಗರ ಹಾಗೂ ವೈಯ್ಯಾಲಿಕಾವಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ವಾಕಿಂಗ್​ ಹಾಗೂ ಸೈಕ್ಲಿಂಗ್​ ಮಾಡುತ್ತಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದನು. ರಸ್ತೆಯಲ್ಲಿ ಹೋಗುತ್ತಿದ್ದವರ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಈ ಕುರಿತಾಗಿ ಯುವತಿಯರು ಸದಾಶಿವನಗರ ಹಾಗೂ ವೈಯ್ಯಾಲಿಕಾವಲ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡ ಸದಾಶಿವನಗರ ಪೊಲೀಸ್ರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿಯರಿಗೆ ರಕ್ಷಣೆ ಇಲ್ವಾ : 
ರಾಜಧಾನಿಯಲ್ಲಿ ವಿಕೃತಿಯನ್ನ ಮೆರೆದಿದ್ದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದ್ದಾರೆ. ಹೊರ ರಾಜ್ಯದ ವಿದ್ಯಾರ್ಥಿನಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ಕೊಟ್ಟ ಬೆನ್ನಲ್ಲೇ ನಗರದಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿರುವುದು ಬೆಂಗಳೂರಿಗರಲ್ಲಿ ಆತಂಕಕ್ಕೆ ಕಾರಣವಾಗಿರೋದಂತು ಸತ್ಯ.
ರಾಯಚೂರು ಮೂಲದವನಾದ ಗಂಗಾಧರ್​ ಸದ್ಯ ಪೀಣ್ಯಾ ಬಳಿಯ ಶಿವಪುರದಲ್ಲಿ ಹೆಂಡತಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದಾನೆ. ಕಳೆದ ಒಂದು ವರ್ಷದಿಂದ ಫುಡ್ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು, ಈತನ ಪತ್ನಿ ಈಗ ಗರ್ಭಿಣಿ. ಮನೆಯಲ್ಲಿ ಹೆಂಡತಿ ಮಕ್ಕಳಿದ್ದು, ಅವರ ಕಷ್ಟ ಎಲ್ಲ ಗೊತ್ತಿದ್ದರೂ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸೋಕೆ ಹೋಗಿ ಇದೀಗ ಜೈಲುಸೇರಿದ್ದಾನೆ. ಈ ಹಿಂದೆಯೂ ಕಾಮುಕ ಗಂಗಾಧರ್​ ಶೇಷಾದ್ರಿಪುರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ಹೀಗೆಂದು ಆರೋಪಿಯೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ, ಆರೋಪಿಯ ವಿರುದ್ಧ ಈ ಹಿಂದೆ ಯಾವ ಪ್ರಕರಣವೂ ದಾಖಲಾಗಿರಲಿಲ್ಲ..
– ಶ್ರೀನಿವಾಸ್ ಗೌಡ, ಕೇಂದ್ರ ವಿಭಾಗದ ಡಿಸಿಪಿ
2 Attachments

Recent Articles

spot_img

Related Stories

Share via
Copy link
Powered by Social Snap