ಬೆಂಗಳೂರು:
ಬೆಂಗಳೂರು ಯುವತಿಯ ಮೇಲಿನ ಆಸಿಡ್ ದಾಳಿ ಪ್ರಕರಣದಲ್ಲಿ ಈಗಾಗಲೇ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ನಾಗೇಶ್‌ನನ್ನು ಬಂಧಿಸಿದ್ದಾರೆ. ನಾಗೇಶ್ ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಆಸಿಡ್ ದಾಳಿ ಮಾಡುವ ಮುನ್ನ ಸಂಪೂರ್ಣವಾಗಿ ಪೂರ್ವ ನಿಯೋಜಿತ ಯೋಜನೆಯನ್ನು ಹಾಕಿಕೊಂಡಿದ್ದ. ನಾಗೇಶ್ ಆಸಿಡ್ ಖರೀದಿಸಲು ತಂತ್ರವನ್ನು ಹೂಡಿದ್ದ ಅನ್ನೊದು ಇದೀಗ ಬಹಿರಂಗವಾಗಿದೆ.
ಆಸಿಡ್ ನಾಗೇಶ್ ಬಾಬು ಅಲಿಯಾಸ್ ನಾಗೇಶ್ ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ಆಸಿಡ್ ಎರಚಿದ್ದ. 16 ದಿನಗಳ ಕಾಲ ತಲೆಮರೆಸಿಕೊಂಡಿದ್ದ ನಾಗೇಶ್ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸಿಕ್ಕಿಬಿದ್ದು ಮಾರ್ಗಮಧ್ಯೆ ಬರುವಾಗ ಕಿತಾಪತಿ ಮಾಡಿ ಕಾಮಾಕ್ಷಿಪಾಳ್ಯ ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಯ ಬೆಡ್ ಹಿಡಿದಿದ್ದಾನೆ.
ಆದರೆ, ಈ ಆಸಿಡ್ ಅಟ್ಯಾಕ್ ಮಾಡುವುದಕ್ಕೂ ಮುನ್ನ ನಾಗ ಯಾವ ರೀತಿ ಪ್ರಿಪರೇಷನ್ ಮಾಡ್ಕೊಂಡು ಆಸಿಡ್ ಕಲೆಕ್ಟ್ ಮಾಡಿಕೊಂಡಿದ್ದ ಎಂಬುದು ಇದೀಗ ಹೊರಬಂದಿದೆ. ನಾಗ ಈ ಹಿಂದೆ ಪೀಣ್ಯ ಅಲ್ಫೈನ್ ಹೌಸಿಂಗ್ ಸರ್ವೀಸಸ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ…
ಈ ಹಿಂದೆಯೇ ಅಟ್ಯಾಕ್ ಮಾಡಲು ರೆಡಿಯಾಗಿದ್ದ ನಾಗ! ಈ ವೇಳೆ ಕಂಪೆನಿಯು ಸೋಲಾರ್ ಕ್ಲೀನಿಂಗ್‌ಗಾಗಿ ಆಸಿಡನ್ನು ಪೀಣ್ಯಾದ ದೀಪ್ತಿ ಲ್ಯಾಬ್‌ನಿಂದ ಆಸಿಡನ್ನು ತರಿಸಿಕೊಳ್ತಿದ್ದರು. ಕಂಪೆನಿಯ ಲೆಟರ್ ಹೆಡ್‌ನ ಬಳಸಿಕೊಂಡು ಪತ್ರವನನ್ನು ನೀಡಿ ಆಸಿಡ್ ಪಡೆಯಲಾಗ್ತಿತ್ತು. ಇದನ್ನೇ ಗಮನಿಸಿದ್ದ ನಾಗೇಶ್ 2020 ರಲ್ಲಿ ಕೆಲಸದಿಂದ ಹೊರಬಂದು ಓಡಾಡಿಕೊಂಡಿದ್ದ. ಅದೇ ವರ್ಷ ಕೆಲಸ ಮಾಡಿದ್ದ ಅಲ್ಫೈನ್ಸ್ ಕಂಪೆನಿಯ ನಕಲಿ ಲೆಟರನ್ನು ಟೈಪ್ ಮಾಡಿ ದೀಪ್ತಿ ಲ್ಯಾಬ್‌ನಲ್ಲಿ 9 ಲೀಟರ್ ಆಸಿಡ್ ಪಡೆದಿದ್ದ. ಆದರೆ, ಸಮಯದಲ್ಲಿ ಯುವತಿಯ ಮೇಲೆ ಅದ್ಯಾಕೋ ಅಟ್ಯಾಕ್ ಮಾಡಿರಲಿಲ್ಲ. ಅದಾದ ಬಳಿಕ ಇದೇ ಏಪ್ರಿಲ್ 25 ನೇ ತಾರೀಕು ಅಲ್ಫೈನ್ಸ್ಕಂಪೆನಿಯ ಹೆಸರಲ್ಲಿ 9 ಲೀಟರ್ ಆ್ಯಸಿಡ್ ಖರೀದಿ ಮಾಡಿ ಅದರಲ್ಲಿ ಅರ್ಧ ಲೀಟರಷ್ಟನ್ನು ಯುವತಿಯ ಮೇಲೆ ಎರಚಿದ್ದ ಆಸಿಡ್ ನಾಗ.
ಪ್ರಬಲ ಆಸಿಡ್ ಮಾರಾಟದ ನಿಯಂತ್ರಣಕ್ಕೆ ಬೇಕಿದೆ ಪ್ರಬಲ ಆ್ಯಕ್ಟ್ ನಾಗನಿಗೆ ಸುಲಭವಾಗಿ ಆಸಿಡ್ ಸಿಕ್ಕಿದ ಹಾಗೇ ಬೇರೆಯವರಿಗೂ ಕರ್ನಾಟಕದಲ್ಲಿ ಸುಲಭವಾಗಿ ಆಸಿಡ್ ಸಿಕ್ತಿದೆ. ನಮ್ಮಲ್ಲಿ ಯಾರಿಗೆ ಆಸಿಡ್ ಮಾರಾಟವನ್ನು ಮಾಡಬೇಕು ಮಾಡಬಾರದು ಅನ್ನೋದರ ಬಗ್ಗೆ ಯಾವುದೇ ಕಠಿಣ ಕಾನೂನುಗಳಿಲ್ಲ. ಈ ಹಿಂದೆ ಸುಪ್ರೀಂಕೋರ್ಟ್ ಆಯಾ ರಾಜ್ಯದವರು ಆಸಿಡ್ ಮಾರಾಟಕ್ಕೆ ಕಠಿಣ ಕಾಯ್ದೆಗಳನ್ನು ತರುವಂತೆ ಸೂಚಿಸಿತ್ತು. ಬೇರೆ ರಾಜ್ಯದವವರು ಆಸಿಡ್ ನಿಯಂತ್ರಣ ಕಾಯ್ದೆಯನ್ನು ತಂದಿದ್ದಾರೆ. ಕರ್ನಾಟಕದಲ್ಲಿ ಆಸಿಡ್ ನಿಯಂತ್ರಣ ಕಾಯ್ದೆಯನ್ನು ಇನ್ನೂ ಸಹ ತಂದಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಗಲ್ಲಿಗಲ್ಲಿಯಲ್ಲಿ ಲೀಟರ್‌ಗೆ 46 ರೂಗೆ ಸಲ್ಫ್ಯೂರಿಕ್ ಆಸಿಡ್ ಸುಲಭವಾಗಿ ಸಿಗ್ತಿದೆ. ಇದರಿಂದಲೂ ಮಹಿಳೆಯ ಮೇಲೆ ಆಸಿಡ್ ದಾಳಿ ಮಾಡಲು ಅನುಕೂಲವಾಗ್ತಿದೆ.
ಮಹಿಳೆಯರ ಸಂರಕ್ಷಣೆಯ ಹಿತದೃಷ್ಟಿ ಹೊಂದಿರುವ ಕಾಯ್ದೆ ಒಟ್ಟಾರೆ ಕರ್ನಾಟಕದಲ್ಲಿ 1999 ರಿಂದ ಇಲ್ಲಿಯವರೆಗೂ ಸುಮಾರು 66 ಪ್ರಕರಣಗಳು ದಾಖಲಾಗಿವೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಆಸಿಡ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರುತ್ತಾ ಆ ಮೂಲಕ ಮಹಿಳೆಯರ ಸಂರಕ್ಷಣೆಗಾಗಿ ಕಟಿಬದ್ಧವಾಗಿತ್ತ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
