ಬೆಂಗಳೂರು : ಬೆಳ್ಳಾರೆ ಪ್ರವೀಣ್ ಹಾಗೂ ಸುರತ್ಕಲ್ ಫಾಜಿಲ್ ಹತ್ಯೆಯ ಹಿಂದೆ ಇರುವ ಆರೋಪಿಗಳ ಜಾಡು ಹಿಡಿದಿರುವ ಪೊಲೀಸರು ಅಪಾದಿತರರನ್ನು ಶೀಘ್ರದಲ್ಲಿಯೇ ಕಾನೂನಿನ ಕುಣಿಕೆಗೆ ತರಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.
ಮಾಧ್ಯಮ ದೊಂದಿಗೆ ಇಂದು ಮಾತನಾಡಿದ ಸಚಿವರು ಪ್ರವೀಣ್ ಹತ್ಯೆ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದದ್ದನ್ನು ಖಚಿತ ಪಡಿಸಿದ್ದಾರೆ.
ಕೃತ್ಯಕೆ ಸಹಕರಿಸಿದವರ ಬಂಧನ ವಾಗಿದೆ, ಹತ್ಯೆ ಮಾಡಿದವರ ಬಂಧನ ಶೀಘ್ರದಲ್ಲಿಯೇ ನಡೆಯಲಿದೆ. ಅಮಾನವೀಯ ಕೃತ್ಯ ನಡೆಸಿದವರನ್ನು ಶಿಕ್ಷಿಸದೆ ಬಿಡುವುದಿಲ್ಲ, ಆದರೆ ಯಾರನ್ನೇ ವಿನಾಕಾರಣವಾಗಿ ಬಂಧಿಸಿಲ್ಲ, ಎಂದು ಸಚಿವರು ತಿಳಿಸಿದರು.
ಹಾಗೂ ಈ ಹಂತದಲ್ಲಿ ಹೆಚ್ಚಿದನೇನೂ ಹೇಳಲು ಇಚ್ಛಿಸುವುದಿಲ್ಲ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಮಸೂದ್ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಪಾಜಿಲ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಹಾಗೂ ಅಪರಾಧಿಗಳನ್ನು ಬಂಧಿಸುವ ಕೆಲಸ ನಡೆಯುತ್ತದೆ, ಎಂದು ತಿಳಿಸಿದ್ದಾರೆ.