ಭಾರತದಲ್ಲಿ ಜಿ-20 ಶೃಂಗ ಸಭೆ 2023 : ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಆಯೋಜನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತದಲ್ಲಿ ಜಿ-20 ಶೃಂಗ ಸಭೆ 2023 ಆಯೋಜಿಸಲಾಗಿದ್ದು, ಇಡೀ ವಿಶ್ವಕ್ಕೆ ಭಾರತವನ್ನು ಪ್ರಬಲವಾಗಿ ಬಿಂಬಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ಮೋದಿ @ 20 : ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

2023ರ ಜಿ 20 ಸಭೆಯನ್ನು ಭಾರತ ದೇಶ ಆಯೋಜಿಸಲಿದೆ. ವಿಶ್ವದ 20 ಪ್ರಮುಖ ರಾಷ್ಟ್ರಗಳ ಸಮ್ಮೇಳನ ಈ ಬಾರಿ ಭಾರತದಲ್ಲಿ ನಡೆಯಲಿದ್ದು, ಬೆಂಗಳೂರಿನಲ್ಲಿಯೂ ಜಿ-20 ಯ 9 ಸಭೆಗಳು ನಡೆಯಲಿದೆ. ಭಾರತದ ರಕ್ಷಣಾ ವಲಯ, ಆರ್ಥಿಕತೆ, ಶಿಕ್ಷಣ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ರಬಲತೆಯನ್ನು ಸಾಧಿಸುತ್ತಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಜಿ 20 ಸಮಿಟ್ ಭಾರತದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇತಿಹಾಸ ಮತ್ತು ಭವಿಷ್ಯದಲ್ಲಿ ಚಿರಸ್ಮರಣೀಯರು :

ಸದಾಕಾಲ ಜನರ ಹೃದಯದಲ್ಲಿ ಸ್ಥಾನ ಗಳಿಸಲು ಜನನಾಯಕನಿಂದ ಮಾತ್ರ ಸಾಧ್ಯ. 130 ಕೋಟಿ ಜನಸಂಖ್ಯೆ, ಸಾವಿರಾರು ಜಾತಿಗಳು, ಹಲವಾರು ಸಂಸ್ಕøತಿಗಳ, ನೂರಾರು ಭಾಷೆಗಳಿರುವ ಭಾರತ ದೇಶದಲ್ಲಿ ಎಲ್ಲರ ಮಧ್ಯೆ ಭರವಸೆ ಹುಟ್ಟಿಸಿ, ಅದಕ್ಕೆ ತಕ್ಕಂತೆ ಕೆಲಸ ಮಾಡಿರುವುದು ಸುಲಭದ ಕೆಲಸವಲ್ಲ. ಮೋದಿಜಿಯವರು ಭಾರತವನ್ನು ಕಠಿಣ ನಿರ್ಣಯ, ಕರಾರುವಾಕ್ಕು ಕಾರ್ಯಕ್ರಮಗಳು, ದಿಟ್ಟತನದ ನಾಯಕತ್ವ, ಬಡವರಿಗಾಗಿ ವಿಶೇಷ ಕಾರ್ಯಕ್ರಮ, ಆರ್ಥಿಕ , ಸಾಮಾಜಿಕ ಬದಲಾವಣೆಯನ್ನು ತರುವ ಕೆಲಸವನ್ನು ಮಾಡಿದ್ದಾರೆ. ಗ್ರಾಮೀಣ, ನಗರ, ರಾಜ್ಯ ಪ್ರದೇಶಗಳಲ್ಲಿ ನಮ್ಮ ಜೀವನಗುಣಮಟ್ಟ, ಬ್ಯಾಂಕಿಂಗ್ ವ್ಯವಹಾರದಿಂದ, ರಾಷ್ಟ್ರೀಯ ಹೆದ್ದಾರಿ, ಬಂದರು ಮತ್ತು ರೈಲ್ವೆ ಅಭಿವೃದ್ಧಿ, ಸ್ವಚ್ಛ ಭಾರತ ಅಭಿಯಾನ, ಜಲ್ಜೀವನ್ ಮಿಷನ್, ಡಿಬಿಟಿ ವ್ಯವಸ್ಥೆ, ಮಾಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ವಿಶೇಷ ನೀತಿಯನ್ನು ರೂಪಿಸಿ 66 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಥನಾಲ್ ಉತ್ಪಾದಿಸಲಾಗುತ್ತಿದೆ. ಮಾಲಿನ್ಯ ತಗ್ಗುವುದಲ್ಲದೇ, ಇಂಧನ ಆಮದನ್ನು ನಿಯಂತ್ರಿಸಬಹುದಾಗಿದೆ. ಜನಸಂಖ್ಯೆಯೇ ಭಾರತ ದೇಶಕ್ಕೆ ಶಾಪ ಎಂದು ಪರಿಗಣಿಸಲಾಗುತ್ತಿತ್ತೋ , ಮೋದಿಯವರು ಅದನ್ನು ವರವಾಗಿ ಪರಿಣಮಿಸಿದರು. ಶೇ. 46 ರಷ್ಟು ಯುವಜನತೆ ಭಾರತ ದೇಶದ ಶಕ್ತಿಯಾಗಿ ಪರಿಚಯಿಸಿದರು ಎಂದರು. ಹೀಗೆ ದೂರದೃಷ್ಟಿಯ ಚಿಂತನೆ ಪ್ರಧಾನಿ ಮೋದಿಯವರದ್ದು ಎಂದರು.

ಮೋದಿ @ 20 ಕನ್ನಡಾನುವಾದದ ಪುಸ್ತಕವನ್ನು ರಾಜ್ಯಾದ್ಯಂತ ಜನರಿಗೆ ತಲುಪಿಸಲಾಗುವುದು :
ಮೋದಿಯವರ ವಿಚಾರಗಳು ಮೋದಿ @ 20 ಪುಸ್ತಕದಲ್ಲಿ ನಮೂದಿಸಲಾಗಿದೆ. ಸುಧಾ ಮೂರ್ತಿ, ಡಾ.ದೇವಿ ಶೆಟ್ಟಿ, ಕ್ರೀಡಾಪಟು ಪಿ.ವಿ.ಸಿಂಧೂ ಸೇರಿದಂತೆ ಹಲವಾರು ಸಾಧಕರು ಈ ಪುಸ್ತಕಕ್ಕೆ ಬರೆದಿದ್ದಾರೆ. ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿಯವರು ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗೆಗೆ ಅಭಿಮಾನ ಹೊಂದಿದ್ದಾರೆ. ಅವರ ವಿಚಾರಧಾರೆಗಳನ್ನು ಕರ್ನಾಟಕದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದ್ಯಂತ ಹಂಚುವ ಕೆಲಸವನ್ನು ಮಾಡಲಾಗುವುದು ಎಂದರು.

ಭಾರತಕ್ಕೆ ವಿಶ್ವದಲ್ಲಿ ಅಗ್ರಮಾನ್ಯ ಸ್ಥಾನ:
ಸಾರ್ವಜನಿಕ ಮೌಲ್ಯಗಳನ್ನು, ಆದರ್ಶಗಳನ್ನು ಸ್ಥಾಪನೆ ಮಾಡುವ ಮೂಲಕ ಮೋದಿಯವರು ದೇಶಕ್ಕೆ ಉತ್ತಮ ಚಾರಿತ್ರ್ಯವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಜನರ ಎಲ್ಲ ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ. ಸಮರ್ಥ ನಾಯಕತ್ವ, ಮಾನವೀಯ ಆಡಳಿತ, ಮೌಲ್ಯಯುತ ರಾಜಕಾರಣ ನೀಡುತ್ತಿರುವ ಮೋದಿಯವರ ಅವಶ್ಯಕತೆ ಭಾರತ ದೇಶಕ್ಕಿದೆ. ಭಾರತ ಇಡೀ ವಿಶ್ವದಲ್ಲಿ ಅಗ್ರಮಾನ್ಯ ಸ್ಥಾನ ಪಡೆಯುವಂತಾಗಲು ಶ್ರಮ ವಹಿಸುತ್ತಿದ್ದಾರೆ. ಮೋದಿಯವರ ವಿಚಾರಧಾರೆಗಳ್ನು, ಕಾರ್ಯಕ್ರಮಗಳನ್ನು ಒಪ್ಪಿ ಬೆಂಬಲಿಸುವ ಅವಶ್ಯಕತೆ ಇದೆ ಎಂದರು.

ಜನಸೇವೆಯೇ ಜೀವನದ ಧ್ಯೇಯ :
ಮೋದಿ ಅವರು ಹತ್ತಿರವಿದ್ದವರಿಗೆ ಪ್ರೀತಿ, ವಿಶ್ವಾಸದ, ಬಡವರ ಬಗ್ಗೆ ಮಿಡಿಯುವ ಹೃದಯವಂತಿಕೆಯ ವ್ಯಕ್ತಿ. ಗುಜರಾತಿನಲ್ಲಿ ಬಾಲ್ಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದ ವ್ಯಕ್ತಿ. ನೋವು, ಅಪಮಾನ ಎಲ್ಲವನ್ನು ಅನುಭವಿಸಿದ ವ್ಯಕ್ತಿ. ಇವೆಲ್ಲದರ ನಡುವೆ ತತ್ವ, ಆದರ್ಶಗಳನ್ನು ಬೆಳೆಸಿಕೊಂಡು, ಅದನ್ನು ಬದುಕಿನಲ್ಲಿಯೂ ಅಳವಡಿಸಿಕೊಂಡವರು. ರಾಮಕೃಷ್ಣಾಶ್ರಮದಿಂದ ಪ್ರಭಾವಿತರಾಗಿ ರಾಮಕೃಷ್ಣ ಪರಮಹಂಸ, ವಿವೇಕಾನಂಧರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡ ಆರ್.ಎಸ್.ಎಸ್ ಪ್ರಚಾರಕ. ತನ್ನ ಆತ್ಮವಿಕಾಸಕ್ಕಾಗಿ , ಜ್ಞಾನೋದಯಕ್ಕಾಗಿ ಎರಡು ವರ್ಷ ಹಿಮಾಲಯದಲ್ಲಿ ಕೂತು ಧ್ಯಾನದಲ್ಲಿದ್ದರು. ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಜನಸೇವೆಯೇ ಜೀವನದ ಧ್ಯೇಯ ಎಂದು ತಿಳಿದು ಜೀವನವನ್ನು ಆರಂಭ ಮಾಡಿವದರು ಎಂದರು.

ಮಾನವೀಯ ಗುಣಗಳ ವ್ಯಕ್ತಿತ್ವ
ನರೇಂದ್ರ ಮೋದಿಯವರ ಬಡತನದ ಅನುಭವವನ್ನು ಮುಖ್ಯಮಂತ್ರಿಯಾದಾಗ, ಗುಜರಾತ್ನಲ್ಲಿ ಬಡತನವನ್ನು ನಿವಾರಣೆ ಮಾಡಲು ಕಾರ್ಯಕ್ರಮ ರೂಪಿಸಿದರು. ಎಲ್ಲರ ಕೈಗೆ ಕೆಲಸ ನೀಡಿ ಬಡತವನ್ನು ದೂರ ಮಾಡಿದ ಧೀಮಂತ ನಾಯಕ ಅವರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಗಾಂಧೀಯವರ ತತ್ವಗಳನ್ನು ಅನುಸರಿಸಿ, ಅತ್ಯಂತ ತಳಮಟ್ಟದ ವ್ಯಕ್ತಿಗೂ ಸ್ವಾಭಿಮಾನದ ಬದುಕನ್ನು ಬದುಕಲು ಅವಕಾಶ ಕೊಟ್ಟು, ಸಮಾನತೆಯ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ. ಅವರದ್ದು ನಿಜವಾಗಿಯೂ ಅತ್ಯಂತ ಮಾನವೀಯ ಗುಣಗಳಿರುವ ವ್ಯಕ್ತಿತ್ವ ಎಂದರು.

ಇತರಿಗಾಗಿ ಬದುಕುವ ನಿಜನಾಯಕ :
ತನಗಾಗಿ ಬದುಕುವುದು ಸಹಜ, ಆದರೆ, ಇತರರಿಗೆ ಬದುಕುವುದು ದೊಡ್ಡ ಗುಣ. ಅಧಿಕಾರ ಬಂದಾಗ ದೇಶ, ನಾಡು, ಬಡವರ ಬಗ್ಗೆ ಚಿಂತೆ ಮಾಡುವವರು ನಿಜ ನಾಯಕ. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಹಾಗೂ ಬಂದ ನಂತರ ಮೋದಿಯವ ವಿಚಾರಧಾರೆ, ಆದರ್ಶ ಬದುಕು ಬದಲಾವಣೆಯಾಗಿಲ್ಲ. ಎಲ್ಲವೂ ಇದ್ದಾಗ, ಸರಳತೆ, ಸಾಮಾನ್ಯ ಮನುಷ್ಯನ ರೀತಿಯಲ್ಲಿ ಬದುಕುವುದು ಮುಖ್ಯ ಮತ್ತು ಅಧಿಕಾರದ ಬಲದಿಂದ ಇತತರಿಗೆ ಸಹಾಯ ಮಾಡುವ ಗುಣ ನಾಯಕನಿಗೆ ಅಗತ್ಯ ಎಂದರು.

ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಲೋಗನಾಥನ್ ಮುರುಗನ್, ಸಚಿವರಾದ ಸೋಮಣ್ಣ, ಬಿ ಸಿ ಪಾಟೀಲ್, ಅಶ್ವಥನಾರಾಯಣ, ಸುನಿಲ್ ಕುಮಾರ್ , ಶಾಸಕ ಉದಯ್ ಗರುಡಾಚಾರ್, ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಡಾ. ಸಿ. ಸೋಮಶೇಖರ, ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ , ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧಾ ಮತ್ತು ಇತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link