ಭಾರತ-ಆಫ್ಘಾನ್ ಟೆಸ್ಟ್’ಗೆ ಕೋಲ್ಕತಾ ಆತಿಥ್ಯ?

0
22

ನವದೆಹಲಿ(ಡಿ.13): 2019ರಲ್ಲಿ ನಡೆಯಲಿರುವ ಭಾರತ-ಆಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಆತಿಥ್ಯ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಐತಿಹಾಸಿಕ ಪಂದ್ಯವನ್ನು ಭಾರತದ ಐತಿಹಾಸಿಕ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೇ ವೇಳೆ ಆಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ನೀಡಲು ಬಿಸಿಸಿಐ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಸ್ವಾಗತಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ‘ಆಫ್ಘಾನಿಸ್ತಾನವನ್ನು ಟೆಸ್ಟ್ ಕ್ರಿಕೆಟ್‌’ಗೆ ಸ್ವಾಗತಿಸಲು ಬಿಸಿಸಿಐ ತೆಗೆದುಕೊಂಡ ನಿರ್ಧಾರ ಬಹಳ ಸಂತೋಷ ನೀಡಿದೆ. ಹೆಚ್ಚೆಚ್ಚು ತಂಡಗಳು ಟೆಸ್ಟ್ ಆಡುವುದರಿಂದ ಆಟದ ಸೊಬಗು ಹೆಚ್ಚಾಗಲಿದೆ’ ಎಂದು ರಾಯ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here