ವಿಜಯಪುರ:
ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಶುಕ್ರವಾರ ನಡೆಯಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ಭಾರೀ ಮಳೆಯಿಂದಾಗಿ ರದ್ದಾಗಿದೆ.
ಬಿಜೆಪಿ ಅಭ್ಯರ್ಥಿ ಪಿಳ್ಳ ಮುನಿಶಾಮಪ್ಪ ಅವರ ಪರವಾಗಿ ಮತಯಾಚಿಸಲು ಅಮಿತ್ ಶಾ ರೋಡ್ ಶೋಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ವಿಜಯಪುರದ ಶಿವಗಣೇಶ ಸರ್ಕಲ್ ನಿಂದ ಚನ್ನರಾಯಪಟ್ಟಣ ಸರ್ಕಲ್ ವರೆಗೂ ರೋಡ್ ಶೋ ನಡೆಸಲು ಸಿದ್ಧತೆಯಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಅಮಿತ್ ಶಾ, ಪ್ರತಿಕೂಲ ಹವಾಮಾನದ ಹೊರತಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಕ್ಕಾಗಿ ಅವರಿಗೆ ಕೃತಜ್ಞತೆಗಳು. ಪ್ರಚಾರಕ್ಕಾಗಿ ದೇವನಹಳ್ಳಿಗೆ ಶೀಘ್ರ ಭೇಟಿ ನೀಡುತ್ತೇನೆ. ಅವರ ಉತ್ಸಾಹ ಕರ್ನಾಟಕದ ಜನರ ಉತ್ಸಾಹ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ