ಮಲಗುವ ಮುನ್ನ ಸೇವಿಸಬಹುದಾದ 5 ಪ್ರಮುಖ ಪಾನೀಯಗಳು

0
29

ರಾತ್ರಿ ಮಲಗುವ ಮೊದಲು ಕೆಲವು ಪಾನೀಯಗಳನ್ನು ಕುಡಿಯುವುದು ಒಳ್ಳೆಯದು. ಆ ಪಾನೀಯಗಳು ಒಳ್ಳೆಯ ನಿದ್ರೆ ನೀಡುವುದರ ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿವೆ. ಅಂತಹ ಪಾನೀಯಗಳು ಯಾವುವೆಂದು ಇಲ್ಲಿದೆ ನೋಡಿ.

ಕೊಕೊ: ಇದು ಒಂದು ರುಚಿಕರವಾದ ಪಾನೀಯ. ಕೋಕೋ ಬೀಜಗಳಿಂದ ಇದನ್ನು ತಯಾರಿಸಲಾಗುತ್ತದೆ. ಕುದಿಯುವ ನೀರಿಗೆ ಮಸಾಲೆಗಳನ್ನು ಹಾಕಿ ಕೊಕೊ ಬೀಜಗಳನ್ನು ಸೇರಿಸಿ ತಯಾರಿಸಿದ ಈ ಪಾನೀಯ ಆರೋಗ್ಯಕ್ಕೆ ಉತ್ತಮ.

ಕ್ಯಾಮೊಮೈಲ್ ಚಹಾ: ಮಲಗುವ 30 ನಿಮಿಷ ಮೊದಲು ಸಕ್ಕರೆ ಬೆರೆಸಿದ ಒಂದು ಕಪ್  ಕ್ಯಾಮೊಮೈಲ್ ಚಹಾ ಕುಡಿಯುವುದು ಒಳ್ಳೆಯದು. ಇದು ನರಗಳ ವಿಶ್ರಾಂತಿಗೆ ಸಹಾಯಮಾಡುತ್ತದೆ. ಹಾಗೂ ನಿದ್ರಾಹೀನತೆಯನ್ನು ತಡೆಯುತ್ತದೆ.

ದೇಸೀ ಹಸುವಿನ ಬೆಚ್ಚಗಿನ ಹಾಲು: ಹಾಲಿನಲ್ಲಿ ಇರುವ ಅಮಿನೋ ಆಮ್ಲ ಮತ್ತು ಟ್ರಿಪ್ಟೊಫಾನ್ ಎಂಬ ಅಂಶಗಳು ಸಖವಾದ ನಿದ್ರೆಗೆ ಸಹಾಯಮಾಡುತ್ತವೆ. ಕ್ಯಾಲ್ಸಿಯಂ ಹೇರಳವಾಗಿರುವ ಈ ಹಾಲನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಸಿಗುವುದರಿಂದ ಹಾಲನ್ನು ಸ್ವಲ್ಪ ಬಿಸಿ ಮಾಡಿ ಕುಡಿಯುವುದು ಸುಲಭ.

ಪುದೀನಾ ಚಹಾ: ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆ ಪುದೀನಾ. ಪುದೀನಾ ಎಲೆಗಳಿಂದ ತಯಾರಿಸಿದ ಚಹಾ ಕುಡಿಯುವುದರಿಂದ ವಾಕರಿಕೆ ದೂರವಾಗುತ್ತದೆ ಮತ್ತು ಹೊಟ್ಟೆಯುರಿಯನ್ನು ಶಮನಗೊಳಿಸುವುದರ ಜೊತೆಗೆ ಆತಂಕ ನಿವಾರಿಸಿ ಸುಲಭವಾಗಿ ನಿದ್ರೆ ಬರುವಂತೆ ಮಾಡುತ್ತದೆ.

ಬಿಸಿ ಚಾಕೋಲೇಟ್: ಕೋಕೋ ಸಸ್ಯದಿಂದ ತಯಾರಿಸಿದ ಕೆನೆಯಂತೆ ಇರುವ ರಾಸಾಯನಿಕ ಮಿಶ್ರಣ ಮಾಡದೆ ಬಿಸಿ ನೀರಿನಿಂದ ತಯಾರಿಸಿದ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಮತ್ತು ಮಕ್ಕಳಿಗೂ ಒಳ್ಳೆಯದು.ಒಂದು ಅಂಶ ಎಂದರೆ ಇವುಗಳಲ್ಲಿ ಯಾವ ಪದಾರ್ಥವನ್ನೇ ಆಗಲಿ ಮಲಗುವ ಮುನ್ನ ಸೇವಿಸಿ ನಂತರ ಹಲ್ಲುಜ್ಜಿ ಮಲಗುವುದು ಒಳ್ಳೆಯದು.


LEAVE A REPLY

Please enter your comment!
Please enter your name here