ನವದೆಹಲಿ:
ಇಂದು ಸಂಸತ್ತಿಗೆ ತೆರಳುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವ್ಯಕ್ತಿಯೊಬ್ಬರು ಸ್ಕೂಟರ್‌ನಿಂದ ಬಿದ್ದಿದ್ದನ್ನು ಗಮನಿಸಿ ಕಾರು ನಿಲ್ಲಿಸಿ ಅಪಘಾತಕ್ಕೀಡಾದ ವ್ಯಕ್ತಿಯ ಬಳಿ ತೆರಳಿ ಯೋಗಕ್ಷೇಮ ವಿಚಾರಿಸಿ ಮುಂದಕ್ಕೆ ಸಾಗಿರುವುದು ಎಲ್ಲಡೆಎ ವೈರಲ್ ಆಗುತ್ತಿದ್ದು ಭಾರಿ ಪ್ರಶಂಸೆಗೂ ಕಾರಣವಾಗಿದೆ.
ಇಂದು ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಲು ಸಂಸತ್ತಿಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರು ತಮ್ಮ ಕಾರು ನಿಲ್ಲಿಸಿ, ದ್ವಿಚಕ್ರ ವಾಹನದಿಂದ ಬಿದ್ದ ವ್ಯಕ್ತಿಯನ್ನು ಪರಿಶೀಲಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.