ಮಾಳವಿಕ ವಿರುದ್ದ ಸಿಡಿದೆದ್ದ ಸಾಹಿತ್ಯ ಪ್ರೇಮಿಗಳು…!!!

ಧಾರವಾಡ:

           ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವೈಚಾರಿಕತೆ ಮತ್ತು ಅಸಹಿಷ್ಣುತೆ ಕುರಿತ ವಿಚಾರಗೋಷ್ಠಿಯಲ್ಲಿ ನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಬಿಜೆಪಿ ಹಾಗೂ ಸಂಘಪರಿವಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದರಿಂದ ಆಕ್ರೋಶಗೊಂಡ ಸಭಿಕರು ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ಡಾ.ಶಂ.ಬಾ.ಜೋಷಿ ಸಭಾಂಗಣದಲ್ಲಿಂದು ನಡೆಯಿತು.

        ಮಾಳವಿಕಾ ಮಾತನಾಡಿ, ಮಂಗಳೂರಿನಲ್ಲಿ ಆರೆಸ್ಸೆಸ್ ಮುಖಂಡರ ಹತ್ಯೆ, ಬೆಂಗಳೂರಿನಲ್ಲಿ ನಡೆದ ಸಂಘಪರಿವಾರದ ಮುಖಂಡನ ಕೊಲೆ, ಕೇರಳದಲ್ಲಿ ನಡೆದ ಆರೆಸ್ಸೆಸ್‍ನ ನಾಯಕರ ಹತ್ಯೆಗಳನ್ನು ಪ್ರಸ್ತಾಪಿಸಿ, ಸಹಿಷ್ಣುತೆ ಎಲ್ಲಿದೆ, ಎಲ್ಲಾ ಕಡೆ ಅಸಹಿಷ್ಣುತೆ ಹೆಚ್ಚಾಗಿದೆ. ಪ್ರಧಾನಿ ಮೋದಿ ಹಿಂದೂ ರಾಷ್ಟ್ರೀಯವಾದಿ ಎಂದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸಭಿಕರ ಗುಂಪೆದು ನಿಮಗೆ ಕೊಟ್ಟಿರುವ ವಿಷಯ ಯಾವುದು. ನೀವೇನು ಮಾತನಾಡುತ್ತಿದ್ದೀರಾ ? ಎಂದು ಪ್ರಶ್ನಿಸಿದರು. ಆಗ ಸ್ಥಳದಲ್ಲಿ ಗೊಂದಲ ನಿರ್ಮಾಣವಾಯಿತು. ಸಭೆಯ ನಡುವೆ ಪೊಲೀಸರ ಮಧ್ಯಪ್ರವೇಶದಿಂದ ಪ್ರತಿಭಟನಕಾರರು ಸುಮ್ಮನಾದರೂ ಮಾಳವಿಕಾ ಭಾಷಣವನ್ನು ಮುಂದುವರಿಸಲು ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಅವರು ಭಾಷಣ ಮಾಡಬಾರದು ಎಂದು ಆಗ್ರಹಪಡಿಸಿದರು.

        ಇದಕ್ಕೆ ಪ್ರತಿಕ್ರಿಯಿಸಿದ ಮಾಳವಿಕಾ, ನಿಮ್ಮಂತಹ ಅಸಹಿಷ್ಣುಗಳ ನಡುವೆ ಭಾಷಣ ಮಾಡುವುದಿಲ್ಲ ಎಂದು ಪ್ರಕಟಿಸಿದರು.ಆದರೆ, ಸಭೆಯಲ್ಲಿದ್ದ ಮತ್ತೊಂದು ಗುಂಪು ಭಾಷಣ ಮಾಡುವಂತೆ ಒತ್ತಾಯ ಮಾಡಿತು. ಅಲ್ಲದೆ, ವಿರೋಧಿಸಿದವರಿಗೆ ನಿಮಗೆ ಇಷ್ಟವಿಲ್ಲದಿದ್ದರೆ ಸಭೆಯಿಂದ ಹೊರಗೆ ಹೋಗಿ. ಅವರು ಪೂರ್ತಿಯಾಗಿ ಮಾತನಾಡಿದ ನಂತರ ಪ್ರಶ್ನೆಗಳಿದ್ದರೆ ಕೇಳಬಹುದು ಎಂದು ತಿಳಿಸಿದರು.

       ಅನಂತರ ಭಾಷಣ ಮುಂದುವರಿಸಿದ ಮಾಳವಿಕಾ, ಕೇರಳದಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರು ಮಹಿಳೆಯರ ದೇವಾಲಯಗಳ ಪ್ರವೇಶ ಸಂಬಂಧ ಮಧ್ಯಪ್ರವೇಶ ಮಾಡುತ್ತಾರೆ. ಆದರೆ, ಅಸಹಿಷ್ಣುತೆ ಬಗ್ಗೆಯೂ ಮಾತನಾಡುತ್ತಾರೆ. ಅಲ್ಲಿಯೇ ಪಕ್ಷದ ಕಾರ್ಯಕರ್ತರನ್ನು ಹೆಚ್ಚಾಗಿ ಹತ್ಯೆ ಮಾಡಲಾಗಿದೆ. ರಷ್ಯಾದಲ್ಲಿ ರೂಪಗೊಂಡ ಮಾಕ್ರ್ಸಿಸಂ ಅಲ್ಲೇ ನಾಶವಾಗಿದೆ. ಹೀಗಾಗಿ, ನಮ್ಮ ದೇಶಕ್ಕೆ ಅಂಬೇಡ್ಕರ್ ವಾದ, ಬುದ್ಧ, ಬಸವ ಬೇಕಾಗಿದ್ದಾರೆ ಎಂದು ಪ್ರತಿಪಾದಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ವಿ.ಗುರುಪ್ರಸಾದ್ ತಮ್ಮ ಭಾಷಣದಲ್ಲಿ, ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅದು ಎಲ್ಲರ ಹಕ್ಕೂ ಆಗಿದೆ. ಆದರೆ ಪ್ರಚೋದನಾಕಾರಿ ಭಾಷಣ, ಧರ್ಮ ನಿಂದನೆ, ಒಬ್ಬ ವ್ಯಕ್ತಿ ಕುರಿತು ಕೀಳಾಗಿ ಬರೆಯುವುದು ಕೂಡ ನಿಷೇಧಿಸ್ಪಟ್ಟಿದೆ ಎಂದು ಮಾಳವಿಕಾ ಮಾತುಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link