ಮುಂಜಾರು ಮಳೆ ಗಣೇಶ್, ದುನಿಯಾ ವಿಜಿ ಒಟ್ಟಿಗೆ ಕೊಡಲಿದ್ದಾರೆ ಬ್ರೇಕಿಂಗ್ ನ್ಯೂಸ್ !

0
29

ಬೆಂಗಳೂರು (ಡಿ.06): ಮುಂಗಾರು ಮಳೆ ಮತ್ತು ದುನಿಯಾ ಕನ್ನಡ ಚಿತ್ರರಂಗದಲ್ಲಿ  ಹೊಸ ಅಲೆ ಎಬ್ಬಿಸಿದ ಸಿನಿಮಾಗಳು.  ಈ ಸಿನಿಮಾ ಮೂಲಕ ಸ್ಯಾಂಡಲ್’ವುಡ್ ನಲ್ಲಿ ಸ್ಟಾರ್ ನಟರಾದ, ಗೋಲ್ಡನ್ ಸ್ಟಾರ್ ಗಣೇಶ್, ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ತ್ತು ವರ್ಷಗಳ ಹಿಂದೆ ಮುಂಗಾರು ಮಳೆಯಿಂದ ಗಣೇಶ್, ದುನಿಯಾದಿಂದ ದುನಿಯಾ ವಿಜಿ ದೊಡ್ಡ ಯಶಸ್ಸಿನೊಂದಿಗೆ ಗಾಂಧಿನಗರದಲ್ಲಿ ಸದ್ದು ಮಾಡಿದ ನಟರಿಬ್ಬರಿಬ್ಬರು ಒಂದಾಗುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬ್ಲಾಕ್ ಕೋಬ್ರಾ ವಿಜಯ್, ಅಭಿಮಾನಿಗಳ ಬಹು ದಿನದ ಆಸೆಯನ್ನ ಈಡೇರಿಸೋಕ್ಕೆ ರೆಡಿಯಾಗಿದ್ದಾರೆ. ಈ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ.

ಆಕ್ಷನ್ ಹೀರೋ ಮತ್ತು ರೊಮ್ಯಾಂಟಿಕ್  ಹೀರೋ ಇಬ್ಬರನ್ನೊಟ್ಟಿಗೆ ಸೇರಿಸಿ ನಿರ್ದೇಶಕ ಪ್ರೀತಂ ಗುಬ್ಬಿ ಸಿನಿಮಾ ಮಾಡ್ತಾ ಇದ್ದಾರೆ. ಈಗಾಗಲೇ  ಗಣೇಶ್ ಮತ್ತು ವಿಜಯ್ ಒಟ್ಟಿಗೆ ಅಭಿನಯಿಸುವ ಸಿನಿಮಾದ ಒಂದು ಲೈನ್ ಸ್ಟೋರಿಯನ್ನ ಕೇಳಿದ್ದಾರೆ. ಈ ಇಬ್ಬರು ಸ್ಟಾರ್ ಕೂಡ ಕಥೆ ಕೇಳಿ, ಒಟ್ಟಿಗೆ ಆಕ್ಟ್ ಮಾಡೋದಕ್ಕೆ  ಗ್ರೀನ್  ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾ ಗಣೇಶ್ ಬ್ಯಾನರ್’ನಲ್ಲೇ ನಿರ್ಮಾಣ ಆಗ್ತಾ ಇರೋದು ವಿಶೇಷ. ಸದ್ಯಕ್ಕೆ ವಿಜಯ್ ‘ಜಾನಿ ಜಾನಿ ಎಸ್‌ ಪಪ್ಪಾ’ದಲ್ಲಿ ಚಿತ್ರದಲ್ಲಿ ಬ್ಯುಸಿ ಇದ್ದು, ಗಣೇಶ್ ಆರೇಂಜ್ ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಇಬ್ಬರ ನಟರ ಕಮಿಂಟ್ ಮೆಂಟ್ ಮುಗಿದ ನಂತರ ಈ ಸಿನಿಮಾ ಸೆಟ್ಟೇರಲಿದೆ.

LEAVE A REPLY

Please enter your comment!
Please enter your name here