ಮೇ 19ಕ್ಕೆ ನಟಿ ಮೇಘನ್‌ ಮಾರ್ಕೆಲ್ ಜತೆ ಬ್ರಿಟನ್‌ ರಾಜಕುಮಾರ ಹ್ಯಾರಿ ಮದುವೆ

0
26

ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಅವರು ಮುಂದಿನ ವರ್ಷ ಮೇ 19ರಂದು ನಟಿ ಮೇಘನ್‌ ಮಾರ್ಕೆಲ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಶುಕ್ರವಾರ ಬ್ರಿಟನ್ ನ ರಾಜ ಮನೆತನ ತಿಳಿಸಿದೆ.

ಕಳೆದ ನವೆಂಬರ್ 27ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಮೇ 19ರಂದು ವಿಂಡ್ಸೊರ್ ನ ಸೆಂಟ್ ಜಾರ್ಜ್ ಚಾಪೆಲ್ ನಲ್ಲಿ ಮದುವೆಯಾಗಲಿದ್ದಾರೆ ಎಂದು ಕೆನ್ಸಿಂಗ್ಟನ್ ಅರಮನೆ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರಿಟನ್ ರಾಜ ಮನೆತನದ ಐದನೇ ರಾಜಕುಮಾರ, 33 ವರ್ಷದ ಹ್ಯಾರಿ, ಜನಪ್ರಿಯ ಟಿವಿ ಧಾರಾವಾಹಿ ‘ಸ್ಯೂಟ್‌’, ‘ಫ್ರಿಂಜ್’ನಲ್ಲಿ ಅಭಿನಯಿಸಿದ್ದ 36 ವರ್ಷದ ಅಮೆರಿಕದ ನಟಿ. ವಿಚ್ಛೇದಿತೆ ಮೇಘನ್ ಮಾರ್ಕೆಲ್‌ ಅವರ ಕೈಹಿಡಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here