ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು,ಇದೊಂತರಾ ಹಳ್ಳಿ ಲವ್: ಹೆಚ್ ಕೆ ಪಾಟೀಲ್

ಬಾಗಲಕೋಟೆ

      ರಾಜ್ಯದ ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು, ಇದೊಂತರಾ ಹಳ್ಳಿ ಲವ್, ಹಾಗಾಗಿ ಹೆಚ್ಚೇನು ಸಮಸ್ಯೆ ಆಗುವುದಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

       ಬಾಗಲಕೋಟೆ ಯಲ್ಲಿ ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿಯಲ್ಲಿ ಅಲ್ಪ ಸ್ವಲ್ಪ ಗೊಂದಲ ಇದೆ. ರಾಹುಲ್ ಗಾಂಧಿ ಒಮ್ಮೆ ಬಂದು ಹೋದರೆ ಅದ ಕೂಡಾ ಸರಿಹೋಗುತ್ತದೆ. ಸಿದ್ದರಾಮಯ್ಯ ಮೈಸೂರಿನಲ್ಲಿ ತಮ್ಮ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವುದೇ ಒಳ ಹೊಡೆತ ಕೊಡುವುದಿಲ್ಲಾ. ಅವರು ಅಣ್ಣ ತಮ್ಮಂದಿರ ರೀತಿ ಪ್ರೀತಿಯಿಂದ ಇದ್ದಾರೆ. ಒಳ ಹೊಡೆತ ಒಳ ಏಟು ಏನಿಲ್ಲ. ಇದೆಲ್ಲಾ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕೆ ನಿಮಗೆಲ್ಲಾ ತಿಳಿಯುತ್ತದೆ ಎಂದರು.

        ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಪಾಕಿಸ್ತಾನಕ್ಕೆ ತೊಂದರೆ ಯಾದರೆ ದೋಸ್ತಿಗಳಿಗೆ ಕಣ್ಣಿರು ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಇದು ಕೆಳಮಟ್ಟದ ವ್ಯಕ್ತಿ ಮಾತನಾಡುವ ಮಾತುಗಳು. ವಂದೇ ಮಾತರಂ ಎಂದು ಬ್ರಿಟೀಷರ ಗುಂಡಿಗೆ ಎದೆಯನ್ನು ಒಡ್ಡಿದವರು ಕಾಂಗ್ರೆಸ್ಸಿಗರಿಗೇ ದೇಶ ಭಕ್ತಿ ಹೇಳಿ ಕೊಡುತ್ತಾರ ಇವರು ಎಂದು ಪ್ರಶ್ನಿಸಿದರು. ಇಂತಹ ದೇಶ ಭಕ್ತಿಯನ್ನು ಹೊಂದಿರುವ ಪ್ರಧಾನಿ ಮೋದಿ ಪುಲ್ವಾಮಾ ದಾಳಿಯಾಗಿ ಗಂಟೆಗಳ ಮೇಲೆ ಅದರ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಇಂತಹ ಉದಾಸೀನದ ಹಾಗೂ ವಚನಭ್ರಷ್ಟ ಪ್ರಧಾನಿ ನಮಗೆ ತಿಳುವಳಿಕೆ ಹೇಳಲು ಅರ್ಹರಲ್ಲ ಎಂದರು.

       ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ನೋಡಿದ ನಂತರ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅದಕ್ಕಾಗಿಯೇ ನಮ್ಮ ರೀತಿಯ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ದೇಶದ ಪ್ರಧಾನಿ ಮೋದಿ ಕಳೆದ 5ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲಾ. ಕೇವಲ ಪ್ರಾಯೋಜಿಗೋಷ್ಠಿಯನ್ನು ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

        ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿದಂತೆ ಹಲವರು ಸಂವಿಧಾನ ಬದಲಿಸುತ್ತೇವೆ. ಸಂವಿಧಾನ ಕಿತ್ತು ಹಾಕುತ್ತೇವೆ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೂಲ ಆಧಾರ ಸ್ಥಂಬವಾದ ಸಂವಿಧಾನವನ್ನು ಕಿತ್ತು ಹಾಕುವ ಮಹಾಪರಾಧ ಮಾಡಲಿಕ್ಕೆ ಬಿಜೆಪಿಯವರು ಹೋರಟಿದ್ದಾರೆ ಎಂದು ಆರೋಪಿಸಿದರು.

        ರಾಜಸ್ತಾನದ ಗವರ್ನರ್ ನಾನು ಬಿಜೆಪಿ ಕಾರ್ಯಕರ್ತ ಎನ್ನುತ್ತಾರೆ. ರಾಜ್ಯಪಾಲರಾಗಿ ಈ ರೀತಿ ಹೇಳುವುದು ಸಂವಿಧಾನಕ್ಕೆ ಮಾಡುವಂತಹ ಅಪಚಾರ. ಇಂತಹ ವ್ಯಕ್ತಿ ಆ ಸ್ಥಾನದಲ್ಲಿರಲು ನಾಲಾಯಕ್. ಈ ವಿಚಾರದಲ್ಲಿ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

       ಸೈನಿಕರ ಡ್ರೆಸ್ ತೊಟ್ಟು ಗಾಗಲ್ ಹಾಕಿಕೊಂಡು ಚುನಾವಣಾ ಪ್ರಚಾರಕ್ಕೆ ಮುಂದಾಗಿರುವ ಪ್ರಧಾನಿ ಮೋದಿ ಅವರನ್ನು ಚುನಾವಣೆಯಿಂದ ವಜಾಗೊಳಿಸಬೇಕು ಎಂದರು.

      ಬಿಜೆಪಿಯವರ ಸಂಕಲ್ಪ ಪ್ರಣಾಳಿಕೆಗೆ ಕಿಮ್ಮತ್ತಿನ ಬೆಲೆಯಿಲ್ಲ. ಆ ಪ್ರಣಾಳಿಕೆಯ ಬಗ್ಗೆ ಎಲ್ಲರೂ ಅಪಹಾಸ್ಯ ಮಾಡುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಮಾಡುತ್ತೇವೆಂದು ಮಾತು ಕೊಟ್ಟಿದ್ದೀರಿ, ರಾಮಮಂದಿರ ಇದುವರೆಗೂ ಯಾಕೆ ಮಾಡಲಿಲ್ಲಾ? ಜನರ ಅಕೌಂಟಿಗೆ ಹಣ ಹಾಕುತ್ತೆವೆಂದು ಹೇಳಿದ್ರೀ? ಅದನ್ನಾದರೂ ಮಾಡಿದಿರಾ? ವರ್ಷಕ್ಕೆ ಎರಡು ಕೋಟಿ ಜನರಿಗೆ ಉದ್ಯೋಗ ನೀಡುತ್ತೀವೆ ಎಂದಿದ್ದೀರಿ, ಇಲ್ಲಿಯವರೆಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಮೋದಿಯವರೆ ಎಂದು ಪ್ರಶ್ನಿಸಿದರು. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಆದರೆ ಅದರ ಬಗ್ಗೆ ತುಟಿಯನ್ನು ಬಿಚ್ಚದ ಪ್ರಧಾನಿಗಳು ವಿರೋಧ ಪಕ್ಷಗಳಿಗೆ ಬುದ್ದಿಹೇಳಲು ಮುಂದಾಗಿದ್ದಾರೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap