ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..!!
ರೂರಲ್ ಗುಡಿಬಂಡೆಯ ಯುವಕ ಗೋಪಿಕೃಷ್ಣ(17) ಮೃತ ಬಾಲಕ
ಗುಡಿಬಂಡೆ : ಪಟ್ಟಣದ ಸಮೀಪವಿರುವ ರೂರಲ್ ಗುಡಿಬಂಡೆ ನಿವಾಸಿ ಶ್ಯಾಮಲಾ ಎಂಬಾಕೆಯ ಮಗ ಗೋಪಿಕೃಷ್ಣ (17)ಮೃತ ಬಾಲಕನಾಗಿದ್ದು ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.
ತಾಯಿ ತನಗೆ ಹೊಸ ಮೊಬೈಲ್ ಕೊಡಿಸಲಿಲ್ಲ ಅಂತ
ಕಳೆದ ತಿಂಗಳು 17 ರಂದು ಮನೆ ಬಿಟ್ಟು ಹೋಗಿದ್ದ ಗೋಪಿಕೃಷ್ಣ ಮನನೊಂದು ಪ್ರವಾಸಿ ಮಂದಿರದ ಹಿಂಭಾಗ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
22 ದಿನಗಳ ನಂತರ ಶವ ಸಿಕ್ಕಿದ್ದು ಸಂಪೂರ್ಣವಾಗಿ ಕೊಳೆದಿದ್ದು ಮೂಳೆಗಳು ಮಾತ್ರ ಪತ್ತೆಯಾಗಿದೆ.
ಗೋಪಿಕೃಷ್ಣ ಕಾಣೆಯಾಗಿರುವ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ದಾಖಲಾಗಿತ್ತು.ಘಟನ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.