ಜೈಪುರ:
ಪ್ರಧಾನಿಗಿಂತ ನಾನು ತುಂಬಾ ದೊಡ್ಡ ಫಕೀರ ಎಂದು ರಾಜಸ್ತಾನ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಹೊಸತಾಗಿ 17 ಜಿಲ್ಲೆಗಳನ್ನು ರಚಿಸುವ ಘೋಷಣೆ ಮಾಡಲಾಗಿದೆ. ಅಶೋಕ್ ಗೆಹ್ಲೋಟ್ ಅವರು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಜನರು ನನ್ನನ್ನು ನಂಬಬೇಕು. ನಾನು ಏನು ಹೇಳಿದರೂ ನನ್ನ ಹೃದಯದಿಂದ ಹೇಳುತ್ತೇನೆ. ಮೋದಿಜಿ, ನಾನು ನಿಮಗಿಂತ ದೊಡ್ಡ ಫಕೀರ. ಮೋದಿ ಜೀ ಅವರು ಧರಿಸಿದ ಉಡುಪನ್ನು ಒಮ್ಮೆಯೂ ಪುನರಾವರ್ತಿಸುವುದಿಲ್ಲ ಎಂಬುದನ್ನು ನೀವು ಗಮನಿಸಿರಬೇಕು. ದಿನಕ್ಕೆ ಒಂದು ಬಾರಿ ಅಥವಾ ಮೂರು ಬಾರಿ ಡ್ರೆಸ್ ಬದಲಾಯಿಸುತ್ತಾರೋ ಗೊತ್ತಿಲ್ಲ. ಆದರೆ ನನ್ನ ಉಡುಪನ್ನು ಹಾಗೆಯೇ ಇಟ್ಟುಕೊಳ್ಳುತ್ತೇನೆ, ನಾನು ನಿಮಗಿಂತ ದೊಡ್ಡ ಫಕೀರನಲ್ಲವೇ? ಗೆಹ್ಲೋಟ್ ಹೇಳಿದರು.
ನನ್ನ ಜೀವನದಲ್ಲಿ ನಾನು ನಿವೇಶನ ಖರೀದಿಸಿಲ್ಲ. ಫ್ಲ್ಯಾಟ್ ಖರೀದಿಸಿಲ್ಲ. ನಾನು ಒಂದು ಗ್ರಾಂ ಚಿನ್ನವನ್ನು ಖರೀದಿಸಿಲ್ಲ. ಯಾವ ಫಕೀರನು ನನಗಿಂತ ದೊಡ್ಡವನು? ಪ್ರಧಾನಿ ಮೋದಿಯವರ ಕನ್ನಡಕದ ಬೆಲೆ ಎರಡೂವರೆ ಲಕ್ಷ ರೂಪಾಯಿ ಎಂದು ಹೇಳಿದರು.