ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ : ಕಾಂಗ್ರೆಸ್‌

ಕೋಲ್ಕತ್ತಾ:

    ವಾರಣಾಸಿಯ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರದ ಹಣವನ್ನು ಬಳಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

   ಸೋಮವಾರ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರಿಯಾನ್, ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ತಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಹೈಲೈಟ್ ಮಾಡುವ ಪ್ರಧಾನಿ ಅವರ ಸಂದೇಶವು ಮಾರ್ಚ್ 16ರಂದು ಮತದಾರರನ್ನು ತಲುಪಿದೆ ಎಂದು ಹೇಳಿದ್ದಾರೆ.

   ಮಾರ್ಚ್ 15ರಂದು ಮತದಾರರಿಗೆ ಪತ್ರದ ರೂಪದಲ್ಲಿ ಮೋದಿ ಸಂದೇಶವನ್ನು ಬರೆದಿದ್ದಾರೆ. ಪ್ರಧಾನಿ ಕಚೇರಿಯನ್ನು ಬಳಸಿಕೊಂಡು ಬಿಜೆಪಿಯು ಮೇಲ್ನೋಟಕ್ಕೆ ಭಾರತ ಸರ್ಕಾರ ಕಳುಹಿಸಿರುವ ಸಂದೇಶದ ರೂಪದಲ್ಲಿ ಸಾರ್ವಜನಿಕ ಖಜಾನೆ ವೆಚ್ಚದಲ್ಲಿ ಪತ್ರವನ್ನು ಬಿಡುಗಡೆ ಮಾಡಿದೆ ಎಂದಿದ್ದಾರೆ.

    ಈ ರೀತಿಯಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಪರವಾಗಿ ಮತದಾರರಿಗೆ ಮನವಿ ಮಾಡುವುದು ಭಾರತದ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸುವುದು ಹೊರತು ಬೇರೇನೂ ಅಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಭವಿಷ್ಯದ ಪ್ರಚಾರಗಳನ್ನು ತಡೆಹಿಡಿಯಲು ಮತ್ತು ಪತ್ರವನ್ನು ಹಿಂತೆಗೆದುಕೊಳ್ಳಲು ಬಿಜೆಪಿ ಮತ್ತು ಅದರ ಅಭ್ಯರ್ಥಿ ಮೋದಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಚುನಾವಣಾ ಆಯೋಗವನ್ನು ಅವರು ಒತ್ತಾಯಿಸಿದ್ದಾರೆ.

    ಮತದಾರರಿಗೆ ಪ್ರಧಾನಿ ಪತ್ರವನ್ನು ಕಳುಹಿಸುವ ವೆಚ್ಚವನ್ನು ಬಿಜೆಪಿ ಮತ್ತು ಮೋದಿಯವರ ಚುನಾವಣಾ ವೆಚ್ಚದ ಲೆಕ್ಕದಲ್ಲಿ ಸೇರಿಸಬೇಕು. ಈ ಸಂವಹನವು ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.

Recent Articles

spot_img

Related Stories

Share via
Copy link
Powered by Social Snap