ಹೆಬ್ಬೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬೂರು, ತುಮಕೂರು ಜಿಲ್ಲೆ ನ್ಯಾಕ್ ‘ಬಿ’ ಮಾನ್ಯತೆ ಪಡೆದ ರೂಸಾಯೋಜನೆಗೆ ಒಳಪಟ್ಟಿರುವ ಈ ಕಾಲೇಜಿನಲ್ಲಿ 2018-19ನೇ ಸಾಲಿನ ತುಮಕೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಯೋಗಸ್ಪರ್ಧೆಯನ್ನು ದಿನಾಂಕ:-20/08/2018 ಮತ್ತು 21/08/2018ರಂದು ತುಮಕೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಸಂಯೋಜಕರಾದ ಶ್ರೀ ಆರ್.ಸುದೀಪ್‍ಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರು ಡಾ.ಆರ್.ನೃಸಿಂಹಮೂರ್ತಿ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಪಿ.ರಾಧ ಉಪಸ್ಥಿತರಿದ್ದರು.
ದಿನಾಂಕ:-21/08/2018ರಂದು ನಡೆದ ಯೋಗ ಸ್ಪರ್ಧೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಏಳು ಕಾಲೇಜುಗಳ ಯೋಗಸ್ಪರ್ಧಿಗಳು ಭಾಗವಹಿಸಿದ್ದರು. ಅವರುಗಳಲ್ಲಿ
ಮಹಿಳಾ ವಿಭಾಗದಲ್ಲಿ
ಪ್ರಥಮ ಸ್ಥಾನ – ಮಹಾಲಕ್ಷ್ಮಿ- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ದ್ವಿತೀಯ ಸ್ಥಾನ – ಪ್ರೇಮ.ಆರ್.- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ತೃತೀಯ ಸ್ಥಾನ – ನಳಿನ.ಬಿ.ಜಿ.- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ನಾಲ್ಕನೇ ಸ್ಥಾನ – ಶಶಿಕಲಾ.ಟಿ.- ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು ಮತ್ತೊಂದು
ನಾಲ್ಕನೇ ಸ್ಥಾನ – ವಿದ್ಯಾ.ಕೆ. – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುರುವೇಕೆರೆ,
ಆರನೇ ಸ್ಥಾನ – ಬೃಂದಾ.ಎಂ. – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುರುವೇಕೆರೆ.
ಪುರುಷರ ವಿಭಾಗದಲ್ಲಿ
ಪ್ರಥಮ ಸ್ಥಾನ – ವೆಂಕಟೇಶ.ಕೆ- ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು
ದ್ವಿತೀಯ ಸ್ಥಾನ – ಅಂಜನ್‍ಕುಮಾರ್.ಓ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ತೃತೀಯ ಸ್ಥಾನ – ಗೋಪೀನಾಥ್.ಕೆ.ಎಸ್. – ಗುರುಶ್ರೀ ಎಜುಕೇಶನ್ ಸೊಸೈಟಿ, ತುಮಕೂರು
ನಾಲ್ಕನೇ ಸ್ಥಾನ – ನಯನ್‍ಕುಮಾರ್ – ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು
ಐದನೇ ಸ್ಥಾನ – ಪರಮೇಶ್.ಡಿ. – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ಆರನೇ ಸ್ಥಾನ – ಮಾರುತಿ.ಪಿ – ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು
ಮಹಿಳಾ ವಿಭಾಗದ ಚಾಂಪಿಯನ್ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ಪುರುಷರ ವಿಭಾಗದ ಚಾಂಪಿಯನ್ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ಸಮಾರೋಪ ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾಲಯ ಸಂಯೋಜಕರಾದ ಸುದೀಪ್‍ರವರು ಯೋಗ ಉಪಯೋಗಗಳನ್ನು ತಿಳಿಸಿದರು ಕಾರ್ಯಕ್ರಮದಲ್ಲಿ ಕ್ರೀಡಾಳುಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಪಿ,ರಾಧ, ಅಧ್ಯಾಪಕರು, ಅಧ್ಯಾಪಕೇತರ ವೃಂದದವರು ಭಾಗವಹಿಸಿದ್ದರು.
