ರಂಗನಾಥಸ್ವಾಮಿ ಜಾತ್ರೆಯಲ್ಲಿ ಮದಗಜಗಳಂತೆ ಕುಸ್ತಿ ಪೈಲ್ವಾನರ ಸೆಣಸಾಟ

ಹಗರಿಬೊಮ್ಮನಹಳ್ಳಿ:

       ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಪ್ರಸಿದ್ದ ಶ್ರೀಬಂಡೆರಂಗನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಗ್ರಾಮದ ಎಪಿಎಂಸಿ ಉಪಮಾರುಕಟ್ಟೆಯ ಆವರಣದಲ್ಲಿ ಗ್ರಾಮದ ಶ್ರೀಹನುಮಾನ್ ಕುಸ್ತಿ ಮಂಡಳಿ, ಶ್ರೀರಂಗನಾಥ ಹಮಾಲರ ಸಂಘ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗಳಲ್ಲಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 15 ಕ್ಕೂ ಹೆಚ್ಚು ಪೈಲ್ವಾನರಿಂದ ಜತೆ ಪೈಕಿ, ಪರ್ಸಿ ಪೈಕಿ ಹಾಗು ಅಂತಿಮ ಹಂತದ ಕಣಕ ಭಟ್ಟಂಗಿ ಪೈಕಿಯಂತಹ ಕುಸ್ತಿ ಪಂದ್ಯಾವಳಿಗಳು ಅತ್ಯಂತ ರೋಚಕವಾಗಿ ನಡೆದವು.

        ಆದರೆ ಪೈನಲ್ ಪಂದ್ಯದಲ್ಲಿ ಯಾರೂ ಜಯಶೀಲರಾಗದೇ ಸಮ ಕುಸ್ತಿಯಲ್ಲಿ ಮುಕ್ತಾಯಗೊಡಿದ್ದರಿಂದ, ಸಾವಿರಾರು ಕುಸ್ತಿ ಅಭಿಮಾನಿಗಳು ನಿರಾಸೆಯಿಂದ ಮರಳಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಜನಸ್ತೋಮದ ಮದ್ಯೆ ಯುವಕರು ಸಿಳ್ಳೆ ಕೇಕೆ ಹಾಕಿ ಕಣಕ್ಕಿಳಿದ ಪೈಲ್ವಾನರನ್ನು ಹುರುದುಂಬಿಸುತ್ತಿದ್ದರು. ಕ್ರೀಡಾಭಿಮಾನಿಗಳ ಪ್ರೋತ್ಸಾಹಕ್ಕೆ ಪೈಲ್ವಾನರು ಒಬ್ಬರಿಗೊಬ್ಬರು ಮದಗಜಗಳಂತೆ ಹೋರಾಡಿ ಚಿತ್ ಮಾಡುತ್ತಿದ್ದರು.

          ಇಂತಹ ಕ್ಷಣ ಕ್ಷಣದ ರೋಮಾಂಚನಕಾರಿ ದೃಶ್ಯವನ್ನು ಸಾವಿರಾರು ಪ್ರೇಕ್ಷಕರು ಕಣ್ತುಂಬಿಕೊಂಡು ಖುಷಿಪಟ್ಟರು.ಹೊಸಪೇಟೆ, ದಾವಣಗೆರೆ ಹರಪನಹಳ್ಳಿ ಹೊಸಪೇಟೆ ಹಾಗು ಇತರ ದೂರದ ಊರುಗಳಿಂದ ಆಗಮಿಸಿದ ಕುಸ್ತಿ ಪಟುಗಳನ್ನು ನೋಡಲು, ಅತ್ಯಂತ ರೋಚಕ ಅನುಭವ ನೀಡಿದ ಪರ್ಸಿ ಪೈಕಿ ಪಂದ್ಯದಲ್ಲಿ ವಿಶ್ವನಾಥ ಇವರನ್ನು ಹರಪನಹಳ್ಳಿಯ ಕಿರಣ ಚಿತ್ ಮಾಡಿ 1500 ನಗದು ಹಾಗು ಬೆಳ್ಳಿ ಖಡಗ ತಮ್ಮದಾಗಿಸಿಕೊಂಡರು.

        ಅಂತಿಮ ಹಂತದ ಕಣಕ ಭಟ್ಟಂಗಿ ಸ್ಪರ್ದೆಯಲ್ಲಿ ಹರಪನಹಳ್ಳಿ ನಾಣಿಕೇರಿ ಕುಮಾರ ಕೆಂಚಪ್ಪ, ಮರಿಯಮ್ಮನಹಳ್ಳಿಯ ಹಂಪಿಕಿಶೋರ ಸೈಪುಲ್ ನಡೆದ ಸ್ಪರ್ಧೆ ಯಾರು ವಿಜಯಿಯಾಗದೇ ಸಮ ಸ್ಥಾನ ಪಡೆದು ತಲಾ 1500 ರೂ ಹಾಗೂ ಬೆಳ್ಳಿ ಕಡಗ ಮತ್ತು ನೆನಪಿನ ಕಾಣಿಕೆ ಪಡೆದರು.ವಿಜಯಿಶಾಲಿಯಾದ ಎಲ್ಲಾ ಕುಸ್ತಿಪಟುಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ಹಾಗು ಬೆಳ್ಳಿ ಖಡಗ ನೀಡಿ ಗೌರವಿಸಿಲಾಯಿತು.
ಬಳಿಕ ಗ್ರಾಮದ ಬೀದಿಗಳಲ್ಲಿ ತಮಟೆ ಹಾಗು ಹಲಗೆ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿದರು

      ಪೋಲಿಸ್ ಠಾಣೆಯ ಎ.ಎಸೈ ಸಿದ್ಲಿಂಗಪ್ಪ, ಬಯಲು ಕುಸ್ತಿ ಪಂದ್ಯಾವಳಿಗಳನ್ನು ಉಧ್ಘಾಟಿಸಿ ಚಾಲನೆ ನೀಡಿದರು. ಎಚ್.ಪ್ರಕಾಶ್, ಎಂ.ಮರಿಯಜ್ಜ, ಎಚ್.ಬಿ.ಗಂಗಾಧರಗೌಡ, ಎಚ್.ಮೈಲಪ್ಪ, ಸೋಮಪ್ಪ, ಏಣ್ಗಿ ರಾಮಣ್ಣ, ಗುಡ್ಲಾನೂರು ವಸಂತ, ಕೆಇಬಿ.ಶರಣಪ್ಪ ಕುಸ್ತಿ ಪಂದ್ಯದ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.ಕಡ್ಡಿ ಚೆನ್ನಪ್ಪ, ಮೋರಿಗೇರಿ ವಿಶ್ವನಾಥ್ ಎಂಪಿ.ಪರಮೇಶ್ವರಪ್ಪ, ಡಂಬ್ರಹಳ್ಳಿ ಪರಮೇಶ್ವರಪ್ಪ, ಕಟ್ಟಿಮನಿ ಪರಸಪ್ಪ, ಹಮಾಲರ ಸಂಘದ ಬಾಚಿನಳ್ಳಿ ಮಹೇಶ್, ರಫಿ, ಇತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link