ರಾಜ್ಯದ ಸಮಿಶ್ರ ಸರ್ಕಾರ ಶೀಘ್ರದಲ್ಲಿ ಪಥನ

0
80

ಹರಪನಹಳ್ಳಿ:

ರಾಜ್ಯದ ಸಮಿಶ್ರ ಸರ್ಕಾರ ಶೀಘ್ರದಲ್ಲಿ ಪಥನ ಹೋಂದಲಿದ್ದು ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ದಿನಮಾನಗಳು ದೂರವಿಲ್ಲ. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಆಗಲಿದ್ದು, ಇದರಲ್ಲಿ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ ಶಾಸಕ ಎಸ್.ವಿ.ರಾಮಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಅರಸೀಕೆರೆ ಹೋಬಳಿಯ ತವಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಮಾತನಾಡಿದ ಅವರು ಗ್ರಾಮದ ಮಾರುತಿ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮ ವಿಕಾಸ ಯೋಜನೆಯಡಿ 6 ಲಕ್ಷ, ಶಾಸಕರ ನಿಧಿಯಿಂದ 4 ಲಕ್ಷ ಸೇರಿ ಒಟ್ಟು 15 ಲಕ್ಷ ರೂ.ಗಳನ್ನು ನೀಡಲಾಗಿದೆ. ಗ್ರಾಮಸ್ಥರು ಸುಂದರ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಬೇಕು. ಅಭಿವೃದ್ಧಿ ವಿಷಯದಲ್ಲಿ ಒಮ್ಮೆ ಮಾತು ಕೊಟ್ಟರೆ ಅದನ್ನು ಉಳಿಸಲು ಪ್ರಾಣವನ್ನಾದರೂ ಕೊಡುತ್ತೇನೆ ಎಂದ ಅವರು, ಕೇಂದ್ರ ಸರ್ಕಾರದ ವಸತಿ ಆಂದೋಲನ ಯೋಜನೆಯಡಿ ತೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 800 ಮನೆ ನಿರ್ಮಾಣದ ಗುರಿ ಮುಟ್ಟಬೇಕು ಎಂದು ಪಿಡಿಒ ಅವರಿಗೆ ಸೂಚಿಸಿದರು.

ತೆಲಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶೀಲಾಕೆ.ಆರ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಬರುವ ಗ್ರಾಮಗಳನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಸಬೇಕು ಎನ್ನುವ ಗುರಿ ಎಲ್ಲ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಬರುವ ಜಿಟ್ಟನಕಟ್ಟೆ, ಬಾಲೇನಹಳ್ಳಿ, ಅರಸಾಪುರ, ಕ್ಯಾರಕಟ್ಟೆ ಗ್ರಾಮಗಳನ್ನು ನಾನು ಎಂದೂ ಕಡೆಗಣಿಸಿಲ್ಲ ಎಂದು ಹೇಳಿದರು.

ಅರಸೀಕೆರೆ ಹೋಬಳಿಯ ಬಾಲೇನಹಳ್ಳಿ, ಕ್ಯಾರಕಟ್ಟೆ, ಅರಸಾಪುರ, ಯರಬಳ್ಳಿ ತಾಂಡಾ, ಯರಬಳ್ಳಿ, ತೌಡೂರು, ತೌಡೂರು ತಾಂಡಾ, ನೆಲಗೊಂಡನಹಳ್ಳಿ, ಕಾವಲಹಳ್ಳಿ, ಗುಳೇದಹಟ್ಟಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಜನರಿಂದ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಇಂದಿರಾ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಸದಸ್ಯೆ ಎಚ್.ನೇತ್ರಾವತಿ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ. ಸಿದ್ದಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಾನಾಯ್ಕ, ಮುಖಂಡರಾದ ರಮೇಶ ನಾಯ್ಕ, ಪೂಜಾರ ದಂಡೆಪ್ಪ, ಜಿ.ಬಸವರಾಜ, ಸಾವಕಾರ ಚಂದ್ರಪ್ಪ, ಯರಬಳ್ಳಿ ಜಾತಪ್ಪ, ಶಿವಯೋಗಿ, ಕೊಟ್ಟೂರು ಗೌಡರ, ವರಕಾಳು ಶಿವರಾಮಪ್ಪ, ಕೊಟ್ರಪ್ಪ, ಜಾಥಪ್ಪ, ಪರಮೇಶ್ವರಪ್ಪ, ಮುಖ್ಯ ಶಿಕ್ಷಕ ಆನಂದಪ್ಪ, ಶಿಕ್ಷಕರಾದ ಚೀದಾನಂದಪ್ಪ ಮನೋಹರ, ಕೆ.ಹನುಮಂತಪ್ಪ, ಪಣಿಯಾಪುರ ಲಿಂಗರಾಜ, ಇತರರಿದ್ದರು.

LEAVE A REPLY

Please enter your comment!
Please enter your name here