ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಬಿಜೆಪಿ

ಬೆಂಗಳೂರು

     ವಿಧಾನಸಭಾಧ್ಯಕ್ಷರ ಪೀಠದ ಮೇಲೆ ಪೇಪರ್ ತೂರಿ ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಿಜೆಪಿಯ 10 ಶಾಸಕರನ್ನು ಸದನದಿಂದ ಅಮಾನತುಗೊಳಿಸಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಪ್ರಜಾಪ್ರಭುತ್ವದ ಬಗ್ಗೆ ವಿದೇಶಗಳಲ್ಲಿ ಸುಳ್ಳು ಮಾತನಾಡುವ ಕಾಂಗ್ರೆಸ್ ಪಕ್ಷದ ಆಡಳಿತವಿರುವ ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನೇ ದಮನಿಸುವ ಯತ್ನಗಳು ನಡೆಯುತ್ತಿವೆ ಎಂದು ದೂರಿದೆ.

     ಖಾಸಗಿ ರಾಜಕೀಯ ಕಾರ್ಯಕ್ರಮಕ್ಕೆ ಅನೈತಿಕವಾಗಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಹೇಗೆ..? ಬಂಧಿತ ಐವರು ಉಗ್ರರ ವಿರುಧ್ಧ ಪ್ರೈಮಾಫೇಸಿ ಸಾಕ್ಷಿಗಳಿದ್ದರೂ ಗೃಹ ಸಚಿವರು ಕ್ಲೀನ್ ಚೀಟ್ ಕೊಟ್ಟಿದ್ದೇಕೆ..? ಮುಂಗಾರು ಕೈಕೊಟ್ಟು ಕಂಗಾಲಾದ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. 42 ರೈತರು ಸಾವಿಗೆ ಶರಣಾಗಿದ್ದಾರೆ. ಸರಕಾರದ ಕ್ರಮಗಳೇನು ಎಂದು ಪ್ರಶ್ನಿಸಿದೆ.

     ಕಾನೂನು ಸುವ್ಯವಸ್ಥೆ ಹದಗೆಟ್ಟು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಶೇಕಡಾ 35 ರಷ್ಟು ಕ್ರೈಮ್ ರೇಟ್ ಹೆಚ್ಚಾಗಿದೆ. ಗೃಹ ಸಚಿವರು ಮಾಡುತ್ತಿರುವುದಾದರೂ ಏನು..? ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಗದ್ದುಗೆ ಹಿಡಿದು ಇದೀಗ ಕಂಡೀಷನ್ ಹಾಕಿದ್ದು ಅಲ್ಲದೆ, ಅದನ್ನು ಜಾರಿ ಮಾಡದೆ ಕಾಲ ಹರಣ ಮಾಡುತ್ತಿರುವುದು ಏಕೆ..? ತರಕಾರಿ, ಹಾಲು, ವಿದ್ಯುತ್, ನೀರು ಹೀಗೆ ಎಲ್ಲಾ ಬೆಲೆಗಳನ್ನು ಏರಿಸುತ್ತಾ ಜನರ ರಕ್ತವನ್ನು ಹೀರುತ್ತಿರುವುದು ಏಕೆ.. ?ನೂರಾರು ಕೋಟಿ ಕೈಬದಲಾಗಿರುವ ವರ್ಗಾವಣೆ ದಂಧೆಗೆ ಕೊನೆ ಎಂದು ಎಂಬುದಾಗಿ ಪ್ರಶ್ನೆಗಳ ಸುರಿಮಳೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap