ವಾಟ್ಸ್’ಅಪ್’ನಿಂದ ಮತ್ತೆರಡು ಹೊಸ ಆಪ್ಷನ್ : ತೀವ್ರ ಕುತೂಹಲ ಮೂಡಿಸುವ ಆಯ್ಕೆಗಳಿವು

0
33

ಸ್ಯಾನ್ ಫ್ರಾನ್ಸಿಸ್ಕೋ(ಡಿ.11): ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಖ್ಯಾತಿ ಗಳಿಸುತ್ತಿರುವ ವಾಟ್ಸ್’ಅಪ್ ವಿಶ್ವದಾದ್ಯಂತ ಈಗಾಗಲೇ 100 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಲವು ಆಯ್ಕೆಗಳನ್ನು ಪರಿಚಯಿಸಿರುವ ವಾಟ್ಸ್’ಅಪ್ ಈಗ ವಿನೂತನವಾದ ಮತ್ತೆರಡು ಹೊಸ ಆಪ್ಷನ್’ಗಳನ್ನು ಪರಿಚಯಿಸುತ್ತಿದೆ. ಮೊದಲ ಆಯ್ಕೆ ‘ಒಂದು ಟಚ್’ನಿಂದ ಬ್ಲಾಕ್ ಮಾಡಿದ್ದ ವ್ಯಕ್ತಿಯೊಂದಿಗೆ ಮತ್ತೆ ಚಾಟ್ ಆರಂಭಿಸುವ ಆಯ್ಕೆ ಹಾಗೂ ಮತ್ತೊಂದು ಗ್ರೂಪ್’ನಲ್ಲಿರುವ ಅಡ್ಮಿನ್’ಗಳು ಸದಸ್ಯರೊಂದಿಗೆ ಪ್ರತ್ಯೇಕವಾಗಿ ಚಾಟ್ ಮಾಡಬಹುದು.

ಎರಡನೇ ಆಯ್ಕೆ ವಿಭಿನ್ನವಾಗಿದ್ದು, ಹೊಸತನದಿಂದ ಕೂಡಿದೆ. ಅಡ್ಮಿನ್ ಗ್ರೂಪ್’ನಿಂದಲೇ ಮಾಡುವ ಚಾಟ್ ಇತರ ಸದಸ್ಯರಿಗೆ ಗೊತ್ತಾಗುವುದಿಲ್ಲ. ಇವೆರಡು ಆಯ್ಕೆಗಳನ್ನು ವಾಟ್ಸ್’ಅಪ್ ಸಂಸ್ಥೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

LEAVE A REPLY

Please enter your comment!
Please enter your name here