ವಾಣಿವಿಲಾಸ ಸಾಗರ ಪರಿಶೀಲಿಸಿದ ಪೌರಾಯುಕ್ತರು

0
13

ಚಳ್ಳಕೆರೆ

        ನಗರದ ಜನಸಂಖ್ಯೆ ಹಾಗೂ ವಸತಿಗಳ ಸಂಖ್ಯೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಎಲ್ಲಾ ನಾಗರಿಕರಿಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನಗರಸಭೆ ಆಡಳಿತ ಒದಗಿಸುತ್ತಿದ್ದು, ಸಾರ್ವಜನಿಕರು ನಗರಸಭೆಗೆ ನೀರಿನ ಕಂದಾಯ ಮತ್ತು ಇತರೆ ಕಂದಾಯಗಳನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಸಹಕರಿಸುವಂತೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮನವಿ ಮಾಡಿದ್ದಾರೆ.

         ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಪ್ರಸ್ತುತ ನಗರದಲ್ಲಿ 6 ಸಾವಿರ ನಲ್ಲಿ ನೀರು ಪಡೆಯಲು ಗ್ರಹಕರು ಈಗಾಗಲೇ ಹಣ ಪಾವತಿಸಿದ್ದು, ದಿನವೊಂದಕ್ಕೆ 9 ಎಂಎಲ್‍ಡಿ ನೀರು ನೀಡಲಾಗುತ್ತಿದೆ. ವಾಣಿವಿಲಾಸ ಸಾಗರದ ನೀರನ್ನು ಮಾತ್ರ ಪ್ರತಿ ಮೂರು ದಿನಕ್ಕೊಮ್ಮೆ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಆದರೆ, ಪ್ರಸ್ತುತ 9ಎಂಎಲ್‍ಡಿ ನೀರು ಲಭ್ಯವಾಗುತ್ತಿದ್ದು, ಇದಕ್ಕೆ ಇನ್ನೂ ಹೆಚ್ಚಿನ ನಲ್ಲಿಗಳು ಕಾರ್ಯನಿರ್ವಹಿಸಬೇಕಿದೆ.

       ಆದರೆ, ನಗರಸಭೆ ಗಮನಕ್ಕೆ ಬಾರದಂತೆ ಕೆಲವೊಬ್ಬರು ಅನಧಿಕೃತವಾಗಿ ನಲ್ಲಿ ಪಡೆದಿದ್ದು, ಅನಧಿಕೃತ ನಲ್ಲಿಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಿದ್ದು, ಇದು ಆರ್ಥಿಕ ತೊಂದರೆಗೆ ಕಾರಣವಾಗಿದೆ. ಈ ಬಗ್ಗೆ ನಗರಸಭಾ ಆಡಳಿತ ಪರಿಶೀಲನೆ ನಡೆಸಲಿದ್ದು, ಅನಧಿಕೃತ ನಲ್ಲಿ ಪಡೆದವರ ಮೇಲೆ ಹೆಚ್ಚಿನ ದಂಡ ಹಾಗೂ ಕಂದಾಯ ವಿಧಿಸುವಂತೆ ಸರ್ಕಾರ ಸೂಚಿಸಿದ್ದು, ಈ ಬಗ್ಗೆ ನಾಗರೀಕರು ತಮ್ಮ ನಲ್ಲಿಗಳ ಕಂದಾಯವನ್ನು ಸಕಾಲದಲ್ಲೇ ಪಾವತಿ ಮಾಡಬೇಕಿದೆ. ನೀವು ನಗರಸಭೆಗೆ ನೀಡುವ ಕಂದಾಯದ ಹಣ ನಗರದ ಅಭಿವೃದ್ಧಿಗೆ ಆರ್ಥಿಕ ಶಕ್ತಿ ತುಂಬಲಿದೆ ಎಂದು ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here