ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ತಾಲ್ಲೂಕು ಬಿಸಿಯೂಟ ತಯಾರಕರು ಹಾನಗಲ್ಲಿನಲ್ಲಿ ಪ್ರತಿಭಟನೆ ನಡೆಸಿದವು.

0
19

ಹಾನಗಲ್ಲ :

           ಸರಕಾರಿ ಅನುದಾನಿತ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಹಸಿವು ನಿಗಿಸುವ ಬಿಸಿಯೂಟ ತಯಾರಕರಿಗೆ ಸರಿಯಾದ ವೇತನ, ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಜೊತೆಗೆ ವಿವಿಧ ಬೇಡಿಕೆಗಳನ್ನು ಒದಗಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್(ಎಐಟಿಯುಸಿ) ಹಾನಗಲ್ಲಿನಲ್ಲಿ ಪ್ರತಿಭಟನೆ ನಡೆಸಿ ತಾಲೂಕ ತಹಶೀಲ್ದಾರ ಸಿ.ಎಸ್.ಭಂಗಿಯವರ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

           ಪ್ರತಿಭಟನೆಯ ಶನಿವಾರ ಪಟ್ಟಣದ ಕುಮಾರೇಶ್ವರ ಮಠದಿಂದ ಪ್ರಮೂಖ ಬಿದಿಗಳೊಂದಿಗೆ ನೂರಾರು ಬಿಸಿಯೂಟ ತಯಾರಕರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗೂತ್ತ ತಹಶಿಲ್ದಾರ ಕಚೇರಿ ತಲುಪಿದರು. ಈ ಸಂಧರ್ಭದಲ್ಲಿ ಕಾರ್ಮಿಕ ಮುಖಂಡ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಬಿಸಿಯೂಟ ಯೋಜನೆ ಆರಂಭದಲ್ಲಿ 2003-04 ರಲ್ಲಿ 300 ರಿಂದ 600 ವರೆಗೆಯಿತ್ತು ಇದರ ವಿರುದ್ದ ಹೋರಾಟ ನಡೆಸಿ 15 ದಿಗಳ ಒಳಗೆ ಮುಖ್ಯ ಅಡಿಗೆಯವರಿಗೆ ಕನಿಷ್ಟ ವೇತನವನ್ನು 2700 ರೂ, ಹಾಗೂ ಅಡಿಗೆ ಸಹಾಯಕರಿಗೆ ಮಾಸಿಕ 2600 ರೂಗಳನ್ನು ಕೊಡುತ್ತಿದೆ, ಆದರೆ ಯೋಜನೆ ಜಾರಿಗೆ ಬಂದ ಮೇಲೆ ಮಕ್ಕಳ ಹಾಜರಾತಿ ಹಾಗೂ ಕಲಿಕೆಯ ಗುಣಮಟ್ಟ ಹೆಚ್ಚಾಗಿದ್ದರಿಂದ ಇಡಿ ದೇಶದಲ್ಲಿ ನಮ್ಮ ರಾಜ್ಯವು ಯೋಜನೆ ಯಶಸ್ವಿಯಾಗಿ ಜಾರಿ ಮಾಡುವಲ್ಲಿ, ಪ್ರಥಮ ಸ್ಥಾನದಲ್ಲಿ ಇರುವುದರಿಂದ ಹೆಮ್ಮೆಯ ಸಂಗತಿ ಆದರೆ ಅತಿ ಕಡಿಮೆ ಸಂಭಾವನೆಯಲ್ಲಿ ಕೆಲಸ ಮಾಡಿತ್ತಿರುವ ಮಹಿಳಾ ನೌಕರರಿಗೆ ವಿವಿಧ ಬೇಡಿಕೆಗಳ ಅವಶ್ಯಕತೆಯಿದೆ ಎಂದರು.

           ಜಿಲ್ಲಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಬಿಸಿಯೂಟ ತಯಾರಕರ ಮಾಸಿಕ ಗೌರವಧನ ವೇತನ ವಿಳಂಬವಾಗುತ್ತಿದ್ದು,ಇನ್ನು ಮುಂದೆ ಪ್ರತಿ 5 ನೇ ತಾರೀಖಿನ ಒಳಗೆ ತಪ್ಪದೆ ಕೊಡಬೇಕು, ಸಮಾರು 15 ವರ್ಷಗಳಿಂದ ಯಾವುದೆ ಕನಿಷ್ಠ ವೇತನ ನಿಗಧಿಪಡಿಸಿಲ್ಲ, ಸರಕಾರಿ ನೌಕರರಂದು ಆದೇಶಿಸುವವರೆಗೂ ತುರ್ತಾಗಿ ಕನಿಷ್ಠ ವೇತನ ನಿಗದಿ ಪಡಿಸಬೇಕು, ಭವಿಷ್ಯ ನಿಧಿ ಇ.ಎಸ್.ಐ ಇನ್ನಿತರೆ ಸೌಲಭ್ಯ ಒದಗಿಸಬೇಕು. ಇತ್ತಿಚೇಗೆ ಸರ್ವೋಚ್ಚನ್ಯಾಲಯ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುಚಂತೆ ಕೇಂದ್ರ ಸರ್ಕಾರಕ್ಕೆ ತಿರ್ಮಾನ ನೀಡಿದೆ ಇದರನ್ವಯ ಬಿಸಿಯೂಟ ತಯಾರಕರು ಸಂಘಟಿತ ಕಾರ್ಮಿಕರಂತೆ ಪರಿಗಣಿಸಿ ಕನಿಷ್ಠ ವೇತನ ಮಾಸಿಕ 18000.ರೂಕೇಂದ್ರ ಹಾಗೂ ರಾಜ್ಯ ಸರಕಾರ ನಿಡಬೇಕು

           ಈ ಎಲ್ಲ ಬೇಡಿಕೆಗಳನ್ನು ಮುಂಬರುವ ದಿನಗಳಲ್ಲಿ ಈಡೇರಿಸದೆ ಹೋದರೆ ರಾಜ್ಯಾಧ್ಯಂತ ಉಗ್ರವಾಗಿ ಹೋರಾಟ ಮಾಡುವುದಾಗಿ ಸರಕಾರವನ್ನು ಎಚ್ಚರಿಸಿದರು.
ಸಂಘಟನಾ ಕಾರ್ಯದರ್ಶಿ ಗುರುನಾಥ ಲಕಮಾಪುರ, ಜಿಲ್ಲಾ ಸಮಿತಿಯ ಸಂಚಾಲಕ ಜಿ.ಡಿ.ಪೂಜಾರ, ಸಹ ಸಂಚಾಲಕಿ ಸರೋಜಮ್ಮಾ ಹಿರೇಮಠ, ತಾಲೂಕ ಸಂಚಾಲಕ ರಂಜಿತಾ ಮರೂಡಿ, ಬಿಸಿಯೂಟ ಅಧಕಾರಿ ಶೇಖರ ಹಂಚಿನಮನಿ ಮುಂತಾದವರಿದ್ದರು

LEAVE A REPLY

Please enter your comment!
Please enter your name here