ಕೌಶಲ್ಯ, ಸಾಮಥ್ರ್ಯವಿದ್ದರೆ ಉದ್ಯೋಗಾವಕಾಶ;ವೀರೇಶ್

ಚಿತ್ರದುರ್ಗ
                ಶಿಕ್ಷಣದಿಂದ ಮಾತ್ರ ಉದ್ಯೋಗ ಸಿಗಲಾರದು. ಕೌಶಲ್ಯ ಮತ್ತು ಸಾಮಥ್ರ್ಯವಿದ್ದಾಗಲೇ ಯಶಸ್ಸು ಉದ್ಯೋಗವನ್ನು ಪಡೆಯಲು ಸಾಧ್ಯ ಎಂದು ಬಾಪೂಜಿ ಸಮೂಹ ವಿದ್ಯಾಸಂಸ್ಥೆಯ ಕಾರ್ಯದರ್ಶೀಗಳಾದ ಕೆ.ಎಂ.ವೀರೇಶ್ ಅಭೀಪ್ರಾಯಪಟ್ಟಿದ್ದಾರೆ.
ತಾಲ್ಲೂಕಿನ ಯಳಗೋಡು ಗ್ರಾಮದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
                 ನಾನು ಗ್ರಾಮೀಣಾ ಪ್ರದೇಶಗಳಲ್ಲಿ ಹುಟ್ಟಿ ಬೆಳೆದವನು. ಆದರೆ ನಿಮಗೆ ಎಲ್ಲಾ ಸೌಲಭ್ಯಗಳು ನಗರ ಪ್ರದೇಶಕ್ಕಿಂತ ಹಳ್ಳಿ ಪ್ರದೇಶದಲ್ಲಿ ಹೆಚ್ಚಾಗಿದ್ದು, ಹಳ್ಳಿ ಪ್ರದೇಶದ ವಿದ್ಯಾರ್ಥಿಗಳು ಓದುವ ಆಕಾಂಕ್ಷೆ ಹೆಚ್ಚಾಗಿ ಕಂಡು ಬರುತ್ತದೆ. ಪದವಿ ಪೂರ್ವ ಶಿಕ್ಷಣದ ವ್ಯವಸ್ಥೆ ತುಂಬಾ ಪಾರದರ್ಶಕವಾಗಿದ್ದು, ಇದರ ಸದುಪಯೋಗವನ್ನು ಪಡೆಯಬೇಕಾದರೆ ಆಯಾ ದಿನದ ಪಠ್ಯಗಳನ್ನು ಅಂದೇ ಓದಬೇಕು ಕಾಲೇಜಿನಲ್ಲಿ ನಡೆಯುವ ಎಲ್ಲಾ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸೋಲು ಗೆಲುವಿನ ಮೆಟ್ಟಲಾಗಬೇಕು ಆತ್ಮ ವಿಶ್ವಾಸವನ್ನು ರೂಡಿಸಿಕೊಂಡು ಗುರಿಯನ್ನು ಮುಟ್ಟುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದುಕೊಂಡಲ್ಲಿ ಒಳ್ಳೆಯ ಬದಕನ್ನು ಕಟ್ಟಿಕೊಳ್ಳಬಹುದು ಇಂದಿನ ಸಮಾಜದಲ್ಲಿ ಜಾಣರಿಗೆ ಬುದ್ಧಿವಂತರಿಗೆ ಮಾತ್ರ ಸಮಾಜದಲ್ಲಿ ಗೌರವ ಘನತೆ ಪ್ರೀತಿ ವಿಶ್ವಾಸ ಸಿಗುತ್ತದೆ. ಇಂದು ಪ್ರತಿಭೆಯನ್ನು ಗುರುತಿಸಿ 6 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದಾರೆ. ಮುಂದಿನ ಬಾರಿ ನೀವೆಲ್ಲರೂ ಪುರಸ್ಕಾರಕ್ಕೆ ಬಾಜನರಾಗಬೇಕೆಂದು ಕರೆ ನೀಡಿದರು.

                  ಕಾಲೇಜಿನ ಪ್ರಾಂಶುಪಾಲರಾದ ನಾಗರಾಜಪ್ಪ.ಎನ್.ಆರ್ ಮಾತನಾಡಿ. ಪ್ರತಿಯೊಬ್ಬರ ಜೀವನದಲ್ಲಿ ಗುರಿಟ್ಟುಕೊಂಡು ಶಿಸ್ತನ್ನು ಮೈಗೂಡಿಸಿಕೊಂಡು ಶ್ರದ್ಧೆ ಮತ್ತು ಭಕ್ತಿ ಇಟ್ಟುಕೊಂಡಿದ್ದರೆ ಮಾತ್ರ ಅಂತಿಮ ಗುರಿಯನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿವರ್ಷ ಸಾಂಸ್ಕøತಿಕ ಮತ್ತು ಕ್ರೀಡೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಹಾಗೂ ವಿಭಾಗಮಟ್ಟಕ್ಕೆ ಹೋಗಿ ಬರುತ್ತಿದ್ದಾರೆ. ಅದೇ ರೀತಿ ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಪಣತೊಡಬೇಕು. ತಮ್ಮ ಗುರಿಯನ್ನು ಮುಟ್ಟುವ ತನಕ ಹೋರಾಡಬೇಕು. ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಅತೀ ಜರೂರಾಗಿ ಮಂಜೂರು ಮಾಡಿಸಿಕೊಡಬೇಕೆಂದು ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರುಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಗ್ರಾಮದ ನಾಗರೀಕರಿಗೆ ಮನವಿ ಮಾಡಿಕೊಂಡಿರುತ್ತಾರೆ. ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದಾಗ ಮಾತ್ರ ನಮಗೆ ಒಳ್ಳೇಯ ಸ್ಥಾನ ದೊರೆಯುತ್ತದೆ ಎಂದು ಶುಭ ಹಾರೈಕೆ ಮಾಡಿರುತ್ತಾರೆ.

                   ಸಹ ಶಿಕ್ಷಕ ಹುರುಳಿ ಬಸವರಾಜ್ ಮಾತನಾಡಿ ಸಾಧಕರು ನಿಮಗೆ ಮಾರ್ಗದರ್ಶಕರಾಗಬೇಕು ಕನಸನ್ನು ಬೆನ್ನೇತ್ತಿ ನನಸಾಗಿಸಿಕೊಳ್ಳಬೇಕು. ನೀವೆಲ್ಲರೂ ಪ್ರತಿಭಾ ಪುರಸ್ಕಾರ ಪಡೆಯುವಂತರಾಗಬೇಕು ನಿಮ್ಮ ಸಾಧನೆಯನ್ನು ಕಂಡು ಮೊದಲು ಹೆಮ್ಮೆ ಪಡುವವರು ನಿಮ್ಮ ಗುರುಗಳು ನಿಮ್ಮ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ಯುವಕರು ನೀವಾಗಬೇಕು ಎಂದು ಕರೆ ನೀಡಿದರು.

                    ಸನ್ಮಾನಕ್ಕೆ ಬಾಜನರಾದ ನಿವೃತ್ತ ಪ್ರಾಚಾರ್ಯ ಸಿ.ವಿ.ರವಿಕುಮಾರ್ ಮಾತನಾಡಿ ಜೀವನದಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ ಸಾಧನೆಯನ್ನು ಮಾಡುವ ಸಂಕಲ್ಪವನ್ನು ಮಾಡಬೇಕು. ಕಾಲೇಜಿನ ಮೂಲಭೂತ ಸೌಕರ್ಯಗಳಲ್ಲಿ ಎರಡು ಪೋಡಿಯಂ (ಡಯಾಸ್) ಕೊಡುತ್ತೇನೆಂದು ವಾಗ್ದಾನ ಮಾಡಿರುತ್ತಾರೆ.

                       ಉಪನ್ಯಾಸಕರು ಶ್ರೀಮತಿ ಕೆ.ಎಸ್.ವೀಣಾ ಮಾತನಾಡಿ ಎಲ್ಲರೂ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಅಂತಸ್ತು ಮತ್ತು ಪಾತ್ರವನ್ನು ಪಡೆದು ನಿಮ್ಮ ಗುರಿ ಮುಟ್ಟುವಂತೆ ಪಣ ತೊಡಬೇಕೆಂದು ಕರೆ ನೀಡಿದ್ದಾರೆ. ಇವರು ಸಹಾ ಕಾಲೇಜಿಗೆ 01 ಪೋಡಿಯಂ (ಡಯಾಸ್) ಕೊಡುತ್ತೇನೆಂದು ವಾಗ್ದಾನವನ್ನು ನೀಡಿರುತ್ತಾರೆ.

                          ಮುದ್ದಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲಲಿತಾ ಮಾತನಾಡಿ ಕಾಲೇಜಿನಲ್ಲಿರುವ ಎಲ್ಲಾ ಉಪನ್ಯಾಸಕರು ಗುಣಮಟ್ಟದಲ್ಲಿದ್ದು, ಸಂಪನ್ಮೂಲರಾಗಿದ್ದು, ಎಲ್ಲರೂ ಇವರ ಆದರ್ಶಗಳನ್ನು ಸದುಪಯೋಗಪಡಿಸಿಕೊಂಡು ಕಾಲೇಜಿಗೆ ಉತ್ತಮ ಫಲಿತಾಂಶ ಪಡೆದು ಗುರುಗಳಿಗೆ ತಂದೆ ತಾಯಿಯರಿಗೆ ಗ್ರಾಮಕ್ಕೆ ಕೀರ್ತಿ ಗೌರವವನ್ನು ತರಬೇಕೆಂದು ಕರೆ ನೀಡಿದರು.

                       ಸಮಾರಂಭದ ಅಧ್ಯಕ್ಷತೆಯನ್ನಾ ವಹಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕೆ.ತಿಪ್ಪೇಸ್ವಾಮಿ ವಿದ್ಯಾರ್ಥಿಗಳು, ಗುರುಗಳು ಹೇಳಿದ ಮಾತುಗಳನ್ನು ಮೈಗೂಡಿಸಿಕೊಂಡು ಶಿಸ್ತಿನಿಂದ ವರ್ತಿಸಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿಯನ್ನು ತಂದು ನಿಮ್ಮ ಗುರಿಯನ್ನು ಮುಟ್ಟುವಂತಾಗಲಿ ಎಂದು ಶುಭ ಕೋರಿರುತ್ತಾರೆ.

                    ಕಾಲೇಜಿನ ಶಿಕ್ಷಣ ಪ್ರೇಮಿ ಹೆಚ್.ಎಂ.ಕರಿಬಸಯ್ಯ ಮಾತನಾಡಿ ಸ್ವಇಚ್ಛೆಯಿಂದ ಪದವಿ ಪೂರ್ವ ಕಾಲೇಜಿಗೆ ಮೈಕ್‍ಸೆಟ್ (ಧ್ವನಿವರ್ಧಕ)ಕೊಡಿಸುತ್ತೇನೆಂದು ವಾಗ್ಧಾನ ನೀಡಿರುತ್ತಾರೆ.ಸಮಾರಂಭದಲ್ಲಿ ಉಪಸ್ಥಿತರಿದ್ದ ಸಿ.ಡಿ.ಸಿ ಸದಸ್ಯರುಗಳಾದ ನಿಂಗಪ್ಪ, ರಂಗಪ್ಪ, ಪ್ರಸನ್ನ, ಶ್ರೀಮತಿ ಶೋಭಾ ಹಾಗೂ ಹೈಸ್ಕೂಲ್ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯರಾದ ಹನುಮಂತರೆಡ್ಡಿ.ಬಿ.ಪಿ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಕು|| ನವಿತ ಎಲ್ಲಾರಿಗೂ ಶುಭ ಸಂದೇಶವನ್ನು ನೀಡಿರುತ್ತಾರೆ. ಅರ್ಚಿತ ಪ್ರಾರ್ಥಿಸಿದರೆ ಎ.ಪದ್ಮಾಚಾರಿ, ನಿರೂಪಿಸಿದರು. ಶ್ರೀಮತಿ ಎಲ್.ಲತಾದೇವಿ, ವಂದಿಸಿದರು