ಶಿಂಧೆ ಬಣಕ್ಕೆ ಮಾಜಿ ಕಾರ್ಪೊರೇಟರ್ ಸೇರ್ಪಡೆ…!

ಮುಂಬೈ: 

      ಮಾಜಿ ಕಾರ್ಪೊರೇಟರ್ ಸಂಜಯ್ ಅಗಲ್ದಾರೆ ಅವರು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾದರು.

    ಕಳೆದ ಒಂದು ವರ್ಷದಲ್ಲಿ ಶಿವಸೇನೆ-ಯುಬಿಟಿಯಿಂದ ಸುಮಾರು ಒಂದು ಡಜನ್ ಮಾಜಿ ಕಾರ್ಪೊರೇಟರ್‌ಗಳು ಶಿಂಧೆ ನೇತೃತ್ವದ ಸೇನೆಗೆ ಸೇರಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಮಹಾ ಸಿಎಂ ಶಿಂಧೆ, ಕಳೆದ 11 ತಿಂಗಳಿನಿಂದ ರಾಜ್ಯದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಪ್ರತಿಪಕ್ಷಗಳು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.
 
    ”ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರ ಕಲ್ಯಾಣಕ್ಕಾಗಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಹಿಂದಿನ ಸರ್ಕಾರದಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಅಲ್ಪಾವಧಿಯಲ್ಲಿಯೇ ತ್ವರಿತಗೊಳಿಸಿದ್ದೇವೆ. 15 ವರ್ಷಗಳ ಕಾಲ ಮಹಾನಗರ ಪಾಲಿಕೆಯನ್ನು ಆಳಿದವರು. ನಗರಕ್ಕಾಗಿ ಏನನ್ನೂ ಮಾಡಿಲ್ಲಿಲ್ಲ” ಎಂದು ಮಹಾ ಸಿಎಂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

Recent Articles

spot_img

Related Stories

Share via
Copy link
Powered by Social Snap