ನವದೆಹಲಿ:
ಮಾಜಿ ಪ್ರದಾನಿ ವಾಜಪೇಯಿ ಅವರು ಶೂನ್ಯ ಮಟ್ಟದಿಂದ ಬಿಜೆಪಿ ಪಕ್ಷವನ್ನು ಕಟ್ಟಿದರು ಎಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಅವರು ತಿಳಿಸಿದರು.
ವಾಜಪೇಯಿ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಮಾತನಾಡುತ್ತಿದ್ದ ಅವರು, ಯಾರ ಬಗ್ಗೆಯೂ ಕೂಡಾ ಕಠಿಣವಾಗಿ ಟೀಕೆ ಮಾಡಿದವರಲ್ಲ. ಲಾಲ್‍ಕೃಷ್ಣ ಅಡ್ವಾಣಿ ಮತ್ತು ವಾಜಪೇಯಿ ಅವರು ಬಿಜೆಪಿ ಪಕ್ಷವನ್ನು ಸಂಘಟಿಸಿದ್ದರು. ವಾಜಪೇಯಿ ಅವರು ಪ್ರದಾನಿ ಆದ ನಂತರ ಪಾಕಿಸ್ತಾನದ ಲಾಹೋರ್‍ಗೆ ಬಸ್ ಯಾತ್ರೆಯನ್ನು ಆರಂಭಿಸಿದರು.ಇವರ ನಾಯಕತ್ವದಲ್ಲಿಯೇ ಕಾರ್ಗಿಲ್ ಯುದ್ದದಲ್ಲಿ ಜಯವನ್ನು ಸಾಧಿಸಲಾಯಿತು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ