ಬೆಂಗಳೂರು : ದೇಶದಲ್ಲಿ ಶೇ.90 ರಷ್ಟು ವಯಸ್ಕರಿಗೆ ಕೋವಿಡ್ 19 ಲಸಿಕೆ ಪೂರ್ಣಗೊಳಿಸಿರುವ ಸಾಧನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಶೇ. 90 ರಷ್ಟ ವಯಸ್ಕ ವ್ಯಕ್ತಿಗಳಿಗೆ ಲಸಿಕೆ ನೀಡಲಾಗಿದೆ. ಈ ಮೈಲಿಗಲ್ಲಿ ಸ್ಥಾಪಿಸಲು ಕಾರಣರಾದ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸಹಕರಿಸಿದ ನಾಗರಿಕರಿಗೆ ಧನ್ಯವಾದಗಳು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ..