ಹಿರಿಯೂರು :
ನಗರದ ಲಕ್ಷ್ಮಮ್ಮ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣ ಶನಿವಾರದ ಪ್ರಯುಕ್ತ ಸ್ವಾಮಿಗೆ ಹಣ್ಣಿನ ಅಲಂಕಾರ ಮಾಡಿದ್ದು ಕಣ್ಮನಸೆಳೆಯುವಂತಿತ್ತು.ಇದೇ ಸಂದರ್ಭದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಅರ್ಚನೆ ಅಭಿಷೇಕ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ದೇವಾಲಯ ಸಮಿತಿಯ ಅಧ್ಯಕ್ಷರಾದ ಹೆಚ್.ಆರ್.ಕಣ್ಣಪ್ಪ, ಕಾರ್ಯದರ್ಶಿ ಡಿ.ತಿಪ್ಪೇಸ್ವಾಮಿ, ಸುಬ್ರಮಣ್ಯದೀಕ್ಷಿತ್, ಹೆಚ್.ಪಿ.ಗುರುದೇವ್, ಮಂಜುನಾಥ್, ಸುರೇಶ್, ಪಾಂಡುರಂಗಯ್ಯ, ನಾಗರಾಜಪ್ಪ, ಮಧುಸೂದನ್, ಸೇರಿದಂತೆ ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೊದಲನೇ ಶನಿವಾರ ಹೂವಿನ ಅಲಂಕಾರ ಎರಡನೇ ಶನಿವಾರ ಚಂದನ ಅಲಂಕಾರ ಮೂರನೇ ಶನಿವಾರ ಬೆಣ್ಣೆಯ ಅಲಂಕಾರ ಮಾಡಲಾಗಿತ್ತು ಎಂಬುದಾಗಿ ಕಾರ್ಯದರ್ಶಿ ಡಿ.ತಿಪ್ಪೇಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.