ಚಳ್ಳಕೆರೆ
ನಗರದ ಅಜ್ಜಯ್ಯನಗುಡಿ ರಸ್ತೆಯ ಶ್ರೀರಾಮ ಎ.ಸಿ.ಗೋಡನ್ ಮುಂಭಾಗದಲ್ಲಿ ಬುಧವಾರ ಬೆಳಗ್ಗೆ 9ರ ಸಮಯದಲ್ಲಿ ಲಾರಿ ಹಾಗೂ ಮೋಟಾರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ತಾನದ ಜೈಶಲ್ ಮೇರ್ ಜಿಲ್ಲೆಯ ಮಾಡ್ವಾ ಗ್ರಾಮದ ಬಾನಸಿಂಗ್ ಮೃತಪಟ್ಟಿದ್ದು, ಇವರ ಜೊತೆ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯವಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ತಾನ ಮೂಲದ ಮೃತಬಾನುಸಿಂಗ್ ಬಡಗಿ ಕೆಲಸ ಮಾಡುತ್ತಿದ್ದು, ಇವರ ಜೊತೆಂiÀiಲ್ಲಿ ಅದೇ ಗ್ರಾಮದ ವೀರ್‍ಸಿಂಗ್ ಮತ್ತು ಭೂಮ್‍ಸಿಂಗ್ ಇವರನ್ನು ಜೊತೆಯಲ್ಲಿಯೇ ಸಮೀಪದ ಗೊರ್ಲಕಟ್ಟೆ ಗ್ರಾಮದ ಕಡೆ ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಪಡಿತರ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವ ಲಾರಿ ಇವರ ಬೈಕ್‍ಗೆ ಡಿಕ್ಕಿ ಹೊಡೆದಿರುತ್ತದೆ.
ಕೂಡಲೇ ಪಿಎಸ್‍ಐ ಎನ್.ಗುಡ್ಡಪ್ಪ ಮತ್ತು ಸಿಬ್ಬಂದಿ ವರ್ಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಲ್ಲದೆ ಅಪಘಾತವೆಸಗಿದ ಲಾರಿಯನ್ನು ವಶಕ್ಕೆ ಪಡೆದಿರುತ್ತಾರೆ. ಅಪಘಾತ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲ ಜನರು ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿರುತ್ತಾರೆ.