ಷೇರು ಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 2 ದಿನದಲ್ಲಿ 2.72 ಲಕ್ಷ ಕೋಟಿ ರೂ. ನಷ್ಟ

ಮುಂಬಯಿ:

    ಷೇರು ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಕುಸಿತ ಕಂಡಿದ್ದು, ಇದರಿಂದ ಹೂಡಿಕೆದಾರರಿಗೆ ಎರಡೇ ದಿನದಲ್ಲಿ 2.72 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.

     ಮುಂಬೈ ಷೇರು ವಿನಿಯಮ ಪೇಟೆಯಲ್ಲಿ ಸೂಚ್ಯಂಕ ವಾರದ ಮೊದಲ ದಿನ ಅಂದರೆ ಸೋಮವಾರ 800 ಅಂಕ ಕುಸಿತ ಕಂಡಿತು. ಮಂಗಳವಾರ ಕೂಡ ಸೆನ್ಸೆಕ್ಸ್‌ ಚೇತರಿಸಿಕೊಳ್ಳಲೇ ಇಲ್ಲ ಒಟ್ಟು 295 ಸೂಚ್ಯಂಕ ಕುಸಿತಗೊಂಡಿದ್ದು ಸೆನ್ಸೆಕ್ಸ್‌ 37,290 ಅಂಕ ತಲುಪಿದೆ.

    ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ವಾಣಿಜ್ಯ ಸಮರಗಳ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಉಂಟಾಗಿದೆ.ಕಳೆದ ಶುಕ್ರವಾರ ಸಂಜೆಯಿಂದ ಇದುವರೆಗೆ 2.72 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ