ಸಂಸದ ಡಿ. ಕೆ. ಸುರೇಶ್ ಮೇಲೆ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ, ನೂಕಾಟ ದೆಹಲಿ ಪೋಲೀಸರ ಅಸಭ್ಯ ವರ್ತನೆ

ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಪ್ರತಿಭಟನೆ

ಸಂಸದ ಡಿ.ಕೆ ಸುರೇಶ್ ರವರನ್ನು ತಳ್ಳಿ ವ್ಯಾನ್ ಹತ್ತಿಸಿದ ಪೋಲಿಸರು

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಹೊರಟ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ತಮಿಳುನಾಡಿನ ಸಂಸದರನ್ನು ದೆಹಲಿಯ ನರೇಲಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ವಿಚಾರಣೆ ಎರಡನೇ ದಿನವೂ ಕೂಡಾ ಮುಂದುವರೆದಿದ್ದು, ಅವರನ್ನು ಭೇಟಿ ಮಾಡಲು ಹೊರಟ ಸಂಸದ ಡಿ. ಕೆ. ಸುರೇಶ್, ಮಾಜಿ ಸಚಿವ ದಿನೇಶ್ ಗುಂಡೂರಾವ್ ಮತ್ತಿತರ ಕಾಂಗ್ರೆಸ್ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೈ ನಾಯಕರನ್ನು ಬಂಧಿಸಿದ ದೆಹಲಿ ಪೋಲೀಸರು : ಕಾಂಗ್ರೆಸ್ ಕಚೇರಿಗೆ ಹೊರಟ ಕೈ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ಪೊಲೀಸರು ಮತ್ತು ಕೈ ನಾಯಕರ ನಡುವೆ ವಾಗ್ವಾದ ನಡೆಯಿತು. ಪೋಲೀಸರ ಧೋರಣೆಯನ್ನು ಸಂಸದ ಡಿ.ಕೆ ಸುರೇಶ್ ಪ್ರಶ್ನಿಸಿದರು. ಪೊಲೀಸರೊಬ್ಬರು ಸುರೇಶ್ ಅವರನ್ನು ಹಿಂಬದಿಯಿಂದ ತಳ್ಳಿ ಪ್ರಜಾಪ್ರತಿನಿಧಿಗಳಿಗೆ ಅಗೌರವ ನಿಡಿದ್ದಾರೆ, ನಂತರ ಅಲ್ಲಿದ್ದ ಬಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ, ನಾವು ಕಾಂಗ್ರೆಸ್ ಕಚೇರಿಗೆ ಹೊರಟಿದ್ದೆವು. ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರು ನಮ್ಮನ್ನು ಅಪಹರಣ ಮಾಡಿದ್ದಾರೆ’ ಎಂದು ಸಂಸದ ಡಿ.ಕೆ ಸುರೇಶ್ ಆರೋಪಿಸಿದ್ದಾರೆ.

ಪೋಲೀಸರೊಂದಿಗೆ ವಾಗ್ವಾದ : ಕಾಂಗ್ರೆಸ್ ಕಚೇರಿಗೆ ಹೊರಟ ನಾಯಕರನ್ನು ದೆಹಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಡಿ. ಕೆ. ಸುರೇಶ್ ಹಾಗೂ ಪೊಲೀಸರೊಂದಿಗೆ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ. ಹಿಂಬದಿಯಿಂದ ಪೊಲೀಸರು ತಳ್ಳಿದ್ದು. ಡಿಕೆ ಸುರೇಶ್ ಗರಂ ಆಗಿದ್ದಾರೆ.

 

ಈ ಕುರಿತು ಕರ್ನಾಟಕ ಕಾಂಗ್ರೆಸ್  ಟ್ವೀಟ್ ಮಾಡಿದ್ದು , ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮತ್ತೊಮ್ಮೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವನ್ನು ನೆನಪಿಸುತ್ತಿದೆ. ಹೋರಾಡುತ್ತೇವೆ. ದೇಶವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸುತ್ತೇವೆ. ಆ ಬದ್ಧತೆ ನಮಗಿದೆ ಎಂದು ಟ್ವೀಟ್ ನಲ್ಲಿ ಹೇಳಿದೆ. ಜನಪ್ರತಿನಿಧಿಗಳೊಂದಿಗೆ ಪೆÇಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap