ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ : ಸತೀಶ್‌ ಜಾರಕೀಹೋಳಿ

ಚಿಕ್ಕಮಗಳೂರು:

    ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಆರು ತಿಂಗಳಿಂದ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ. ಸರ್ಕಾರ ಬಿಳುತ್ತದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದು ವಿರೋಧ ಪಕ್ಷದವರು ಹೇಳಿದ ತಕ್ಷಣ ಸರ್ಕಾರ ಬಿಳುವುದಿಲ್ಲ. ಐದು ವರ್ಷ ಈ ಸರ್ಕಾರ ಗಟ್ಟಿಯಾಗಿರಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

   ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರ ಬಿಳುತ್ತದೆ. ಮುಖ್ಯಮಂತ್ರಿ ಬದಲಾವಣೆಯಾಗುತ್ತೇ ಎಂಬ ಚರ್ಚೆಗೆ ಸಂಭಂದ ಪ್ರಶ್ನೆಗೆ ಪ್ರತಿಕ್ರಿಸಿ, ಯಾರು ಹೇಳಿದ್ದು ನಿಮ್ಮಗೆ ವಿಪಕ್ಷಗಳು ಡೇ ಓನ್‌ನಿಂದ ಹೇಳುತ್ತಿದೆ. ಈಗ 18 ತಿಂಗಳು ಕಳೆದಿದೆ. ವಿರೋಧ ಪಕ್ಷದವರು ಹೇಳುತ್ತಾರೆಂದು ಸರ್ಕಾರ ಬಿಳಲ್ಲ ಎಂದರು.

   ಜಾತಿಗಣತಿ ವರದಿ ಪರ ವಿರೋಧ ಸಂಬಂಧ ಮಾತನಾಡಿದ ಅವರು ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗಬೇಕು. ಸದನಕ್ಕೆ ಬರಬೇಕು. ಅದರಲ್ಲಿ ಏನಿದೆ ಎಂದು ನೋಡೋಣ ಎಂದು ಹೇಳಿದರು. ಕೋಳಿವಾಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೂಡಾ ಹಗರಣಕ್ಕೂ ಹರಿಯಾಣ ಚುನಾವಣೆಗೂ ಏನು ಸಂಬಂಧ, ಮೂಡಾ ನಮ್ಮ ರಾಜ್ಯಕ್ಕೆ ಸೀಮಿತವಾಗಿರುವ ವಿಚಾರ ಅದರ ಪಾಡಿಗೆ ಅದು ತನಿಖೆ ನಡೆಯುತ್ತಿದೆ ಎಂದರು. ಜಮ್ಮು ಕಾಶ್ಮೀರ ಮತ್ತು ಹರಿಯಾಣ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ರಾಜ್ಯದಲ್ಲಿ ಚುನಾವಣೆ ಇನ್ನೂ ಮೂರುವರೆ ವರ್ಷ ಇದೆ. ಆಗ ಯಾವ ವಿಚಾರಗಳು ಮುನ್ನೆಲೆಯಲ್ಲಿ ಇರುತ್ತೋ ನೋಡೋಣ ಎಂದರು.

Recent Articles

spot_img

Related Stories

Share via
Copy link
Powered by Social Snap