ಸರ್ಕಾರ ರಚನೆಗೆ  ಕಾಂಗ್ರೆಸ್, ಜೆಡಿಎಸ್ ಶತಾಯಗತಾಯ ಪ್ರಯತ್ನ

0
18

ಬೆಂಗಳೂರು

ರಾಜ್ಯದಲ್ಲಿ ಅತಂತ್ರವಾಗಿ ಈ ಬಾರಿಯ ಚುನಾವಣಾ ಫಲಿತಾಂಶ ಹೊರಬಂದಿರುವ ಕಾರಣ ಶತಾಯಗತಾಯ ಮಾಡಿ ಯಾದರೂ ಬಿಜೆಪಿ ಸರ್ಕಾರ ರಚನೆ ಮಾಡುವುದನ್ನು ನಡೆಯಬೇಕೆಂದು ಮನಸ್ಸಿಮಾಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೀಗಾಗಲೇ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸಿಗೆ ಸರಕಾರ ರಚನೆ ಮಾಡುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಕರೆ ನೀಡಿಲ್ಲ. ಹೀಗಾಗಿ ಬಲ ಪ್ರದರ್ಶನಕ್ಕೆ ಎರಡೂ ಪಕ್ಷಗಳು ಮುಂದಾಗಿವೆ.

ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ಎಚ್. ಡಿ. ಕುಮಾರಸ್ವಾಮಿ ಮತ್ತು ಡಾ. ಜಿ. ಪರಮೇಶ್ವರ್ ತಾವು ಹೊಂದಿರುವ ಸಂಖ್ಯಾ ಬಲವನ್ನು ರಾಜ್ಯಪಾಲರ ಮುಂದಿಡಲಿದ್ದಾರೆ. ಇದಕ್ಕಾಗಿ ಎಲ್ಲಾ ಶಾಸಕರ ಸಹಿ ಸಂಗ್ರಹವನ್ನು ಆರಂಭಿಸಿದ್ದು, ಹೆಚ್ಚಿನ ಎಲ್ಲಾ ಶಾಸಕರ ಸಹಿ ಸಂಗ್ರಹಿಸಲಾಗಿದೆ.

LEAVE A REPLY

Please enter your comment!
Please enter your name here