ಸಲೀಲ್ ಪರೇಖ್ ಇನ್ಫೋಸಿಸ್ ನ ನೂತನ ಸಿಇಒ, ಎಂಡಿ

0
35

ಬೆಂಗಳೂರು: ಇನ್ಫೋಸಿಸ್ ನ ನೂತನ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕರನ್ನಾಗಿ ಸಲೀಲ್ ಪರೇಖ್ ನೇಮಕ ಮಾಡಲಾಗಿದೆ. ಜ.2, 2018 ರಿಂದ ಸಲೀಲ್ ಪರೇಖ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಐಟಿ ಉದ್ಯಮದ ಕ್ಷೇತ್ರದಲ್ಲಿ 3 ದಶಕಗಳಷ್ಟು ಅನುಭವ ಹೊಂದಿರುವ ಸಲೀಲ್ ಪರೇಖ್ ಇನ್ಫೋಸಿಸ್ ಗೆ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕರಾಗಿ ನೇಮಕವಾಗಿರುವುದನ್ನು ತಿಳಿಸಲು ಹರ್ಷಿಸುತ್ತೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಫ್ರೆಂಚ್‌ ಐಟಿ ಕಂಪೆನಿ ಕ್ಯಾಪ್‌ಜೆಮಿನಿಯ ಎಕ್ಸ್‌ಕ್ಯೂಟಿವ್‌ ಬೋರ್ಟ್‌ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಪರೇಖ್‌, ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ವ್ಯವಹಾರವನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ ಹೇಳಿದ್ದಾರೆ. ಹಾಲಿ ಯು.ಬಿ.ಪ್ರವೀಣ್‌ ರಾವ್‌ ಅವರು ಸಿಇಓ ಮತ್ತು ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಅಧಿಕಾರಾವಧಿ 2018 ರ ಜ.2 ಕ್ಕೆ ಅಂತ್ಯವಾಗಲಿದೆ.

LEAVE A REPLY

Please enter your comment!
Please enter your name here